ಎಸ್ಕೇಪ್ ಆಗೋ ವೇಳೆ ಅಡ್ಡ ಬಂದ ಆರೋಪ: ವೃದ್ದನನ್ನು ಕೊಂದ ಪ್ರೇಮಿಗಳು
ಗುಜರಾತ್ ನ ಕಚ್ ನಲ್ಲಿ 27 ವರ್ಷದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರ ವೃದ್ಧರೊಬ್ಬರನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ದುರಂತ ಏನಂದ್ರೆ ಇವರಿಬ್ಬರಿಗೆ ಆ ವ್ಯಕ್ತಿ ತಿಳಿದಿರಲಿಲ್ಲ. ಪ್ರೇಮಿಗಳು ಒಟ್ಟಿಗೆ ಓಡಿಹೋಗುವ ವೇಳೆ ಈ ವೃದ್ಧ ಅಡ್ಡ ಬಂದಿದ್ದಾನೆ ಎಂದು ತಿಳಿದು ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ತಪ್ಪಿಸಿಕೊಳ್ಳಲು ತೀರ್ಮಾನಿಸಿದ ನಂತರ, ರಾಮಿ ಕೇಸರಿಯಾ ಮತ್ತು ಅನಿಲ್ ಗಂಗಲ್ ಎಂದು ಗುರುತಿಸಲ್ಪಟ್ಟ ಪ್ರೇಮಿಗಳು ಒಬ್ಬಂಟಿಯಾಗಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಕೊಂದು, ನಂತರ ದೇಹವನ್ನು ಸುಟ್ಟುಹಾಕಿದ್ದಾರೆ.ಜುಲೈನಲ್ಲಿ ಅಪರಾಧ ನಡೆದ ಮೂರು ತಿಂಗಳ ನಂತರ ಇವರಿಬ್ಬರನ್ನು ಶನಿವಾರ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ರಾಮಿ ಮತ್ತು ಅನಿಲ್ ವೃದ್ಧನಿಗೆ ಬೆದರಿಕೆ ಹಾಕಿ ಆತನನ್ನು ಕೊಂದಿದ್ದಾರೆ. ನಂತರ ದೇಹವನ್ನು ಸುಟ್ಟುಹಾಕಿದ್ದಾರೆ. “ಈ ಕೃತ್ಯವು ಕುಟುಂಬ ಸದಸ್ಯರನ್ನು ದಾರಿ ತಪ್ಪಿಸುವ ಮತ್ತು ಪ್ರೇಮಿಗಳು ಮುಕ್ತವಾಗಿ ಒಟ್ಟಿಗೆ ವಾಸಿಸಲು ಅನುವು ಮಾಡಿಕೊಡುವ ಉದ್ದೇಶವನ್ನು ಹೊಂದಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth