ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥ

maruvai
21/01/2022

ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥರಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಗಂಜಿಮಠ, ಕುಪ್ಪೆಪದವು, ಕುಳವೂರು, ಮುತ್ತೂರು ಪರಿಸರದಲ್ಲಿ ಈ ಘಟನೆ ನಡೆದಿದೆ.

ಕಳೆದ ಶನಿವಾರ ಈ ಘಟನೆ ನಡೆದಿದೆ. ಸ್ಥಳೀಯ ಮೀನು ಮಾರಾಟಗಾರನಿಂದ ಪಡೆದ ಮರುವಾಯಿ ಮೀನನ್ನು ಮನೆಯಲ್ಲಿ ಪದಾರ್ಥ ಮಾಡಿ ತಿಂದವರು ಅಸ್ವಸ್ಥರಾದ್ದಾರೆ. ಈ ಪದಾರ್ಥ ತಿಂದ ಕೆಲವೇ ಹೊತ್ತಿನಲ್ಲಿ ಕೆಲವರಿಗೆ ತಲೆ ಸುತ್ತು, ಎದ್ದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ಬಂದಿತ್ತು. ಕೆಲವರ ಕಣ್ಣು ಮಂಜಾಗಿ ಕಣ್ಣು ತೆರೆಯಲು ಅಸಾಧ್ಯವಾಗಿತ್ತು. ಇನ್ನೂ ಕೆಲವರಿಗೆ ಹೊಟ್ಟೆನೋವು ‌ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಅಸ್ವಸ್ಥರಾದ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೀನು ಕೆಡದಂತೆ ಬಳಸುವ ರಾಸಾಯನಿಕದಿಂದ ಈ ಅಸ್ವಸ್ಥತೆ ಉಂಟಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೈದ್ಯಕೀಯ ಕೋರ್ಸ್‌: ಒಬಿಸಿಗಳಿಗೆ ಶೇ. 27, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಗೆ ಸುಪ್ರೀಂಕೋರ್ಟ್‌ ಅನುಮತಿ

ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯ ಯಶಸ್ವಿ ಪರೀಕ್ಷೆ

ಬಂಟ್ವಾಳ: ಡೆತ್ ನೋಟು ಬರೆದಿಟ್ಟು ಪಟ್ಟಣ ಪಂಚಾಯತ್‌ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಅಫ್ಘಾನಿಸ್ತಾನ: ಗುಂಡಿನ ದಾಳಿಗೆ ತಾಲಿಬಾನ್ ಕಮಾಂಡರ್, ಆತನ ಪುತ್ರ ಸೇರಿ 6 ಮಂದಿ ಸಾವು

 

ಇತ್ತೀಚಿನ ಸುದ್ದಿ

Exit mobile version