ಮಸೀದಿ ಮೈಕ್ ಬಳಕೆ ಮಾಡಿದರೆ 1 ಸಾವಿರ ಠಾಣೆಗಳಲ್ಲಿ ದೂರು ದಾಖಲು | ಪ್ರಮೋದ್ ಮುತಾಲಿಕ್ - Mahanayaka
12:17 AM Tuesday 4 - February 2025

ಮಸೀದಿ ಮೈಕ್ ಬಳಕೆ ಮಾಡಿದರೆ 1 ಸಾವಿರ ಠಾಣೆಗಳಲ್ಲಿ ದೂರು ದಾಖಲು | ಪ್ರಮೋದ್ ಮುತಾಲಿಕ್

muthalik
21/03/2021

ಕಾರವಾರ:  ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್‌ ಬಳಕೆ ಮಾಡದಂತೆ ಆದೇಶಿಸಿದ್ದು ಈ ಕಾನೂನು ಜಾರಿ ಆಗದೇ ಇದ್ದಲ್ಲಿ 1 ಸಾವಿರ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಲಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

22 ವರ್ಷದ ಹಿಂದೆ ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದರೆ ಈ ಕಾನೂನು ಪಾಲನೆಯಾಗಿಲ್ಲ. ಇದೀಗ ವಕ್ಫ್ ಬೋರ್ಡ್‌ ಆದೇಶ ಹೊರಡಿಸಿದೆ. ಇದನ್ನು ಪಾಲಿಸದೇ ಇದ್ದಲ್ಲಿ ಏಪ್ರಿಲ್‌ ತಿಂಗಳ ಅಂತ್ಯದಲ್ಲಿ 1 ಸಾವಿರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ದಿನಕ್ಕೆ 5 ಬಾರಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುತ್ತಾರೆ. ಧಾರ್ಮಿಕ ಕೇಂದ್ರಗಳಾದ ಚರ್ಚ್‌, ಮಸೀದಿ, ದೇವಸ್ಥಾನ ಎಲ್ಲಿಯೇ ಆದರೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ ಮಾಡುವುದು ನಡೆಯುತ್ತಿದ್ದರೆ ಇಂತಹ ವ್ಯವಸ್ಥೆ ನಿಲ್ಲಿಸಿದರೆ ತಪ್ಪಿಲ್ಲ. ಅದು ಯಾವ ಧರ್ಮವಾದರೂ ಇತರರಿಗೆ ತೊಂದರೆ ನೀಡಿ ಧರ್ಮಾಚರಣೆ ಮಾಡಬೇಕೆನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ