ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ
30/03/2021
ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಫರಂಗಿಪೇಟೆ-ಅಮ್ಮೆಮಾರ್ ರಸ್ತೆಯಲ್ಲಿರುವ ಬಿರುರ್ಲ್ ವಾಲಿದೈನ್ ಮಸೀದಿಯ ಧರ್ಮಗುರುಗೆ ರಾತ್ರಿ 12 ಗಂಟೆಯ ವೇಳೆಗೆ ಮಸೀದಿಗೆ ನುಗ್ಗಿದ ತಂಡವೊಂದು ಹಲ್ಲೆ ನಡೆಸಿದೆ.
ಮಸೀದಿಯ ಧರ್ಮಗುರು ಕುಂದಾಪುರದ ನಿವಾಸಿಯಾಗಿರುವ ಮುಸ್ತಾಕ್ ಹಲ್ಲೆಗೊಳಗಾದವರಾಗಿದ್ದಾರೆ. ಸುಮಾರು 3 ಜನರ ತಂಡ ಮಸೀದಿಗೆ ನುಗ್ಗಿದ್ದು, 2ನೇ ಮಹಡಿಯಲ್ಲಿದ್ದ ಮುಸ್ತಾಕ್ ಅವರ ಕತ್ತು ಹಿಡಿದು ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರು ದುಷ್ಕರ್ಮಿಗಳನ್ನು ದೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಸೀದಿ ಅಧ್ಯಕ್ಷ ಸೈಯ್ಯದ್ ಬಾವಾ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಮಸೀದಿಯ ಸಿಸಿ ಕ್ಯಾಮರದಲ್ಲಿ ಆರೋಪಿಗಳು ಮಸೀದಿಯೊಳಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.