ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್
ಮಂಗಳೂರು: ತೆಂಕ ಉಳಿಪಾಡಿ ಮಳಲಿ ಪೇಟೆಯ ಜುಮಾ ಮಸೀದಿ ನವೀಕರಣದ ವೇಳೆ ದೇವಸ್ಥಾನದ ಕುರುಹುಗಳು ಕಂಡು ಬಂದಿವೆ ಎನ್ನುವ ವಿವಾದಕ್ಕೆ ಸಂಬಂಧಿಸಿದಂತೆ ಹಿಂದುತ್ವ ಪರ ಸಂಘಟನೆಗಳು ಕೇರಳ ಮೂಲದ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಹಾಕಿಸಿದ್ದಾರೆ.
ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಪೇಟೆ ಜುಮಾ ಮಸೀದಿಯಲ್ಲಿ ಈ ಹಿಂದೆ ಜೈವ ಸಾನಿಧ್ಯ ಇತ್ತು. ನಾಶವಾದ ದೈವ ಸಾನಿಧ್ಯವನ್ನು ಪುನರ್ ಸ್ಥಾಪಿಸಬೇಕು ಇಲ್ಲವಾದರೆ ಊರಿಗೆ ಕೇಡು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆನ್ನಲಾಗಿದೆ.
ಮಳಲಿ ಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡ ನವೀಕರಣದ ವೇಳೆ ದೇವಸ್ಥಾನ ಪತ್ತೆಯಾಗಿದೆ ಎಂದು ಏಪ್ರಿಲ್ 21ರಿಂದ ಹಿಂದುತ್ವ ಪರ ಸಂಘಟನೆಗಳು ವಿವಾದ ಎಬ್ಬಿಸಿ, ನವೀಕರಣಕ್ಕೆ ಅಡ್ಡಿಪಡಿಸಿದ್ದರು. ಸದ್ಯ ಈ ವಿಚಾರಕ್ಕೆ ಕೋರ್ಟ್ ನಲ್ಲಿದ್ದು, ಇದರ ನಡುವೆಯೇ ತಾಂಬೂಲ ಪ್ರಶ್ನೆ ಕೇಳಲಾಗಿದೆ.
ಇನ್ನೂ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್, ತಾಂಬೂಲ ಪ್ರಶ್ನೆ ಕೇಳುವ ವಿಚಾರ ಸಂಬಂಧ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು ಎಂದು ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಟೈರ್ ಸ್ಫೋಟ
ಜಿನ್ನಾ ಟವರ್ ಗೆ ಎಪಿಜೆ ಅಬ್ದುಲ್ ಕಲಾಂ ಹೆಸರಿಡಲು ಬಿಜೆಪಿ ಆಗ್ರಹ
ಸ್ಪೈಸ್ ಜೆಟ್ ಮೇಲೆ ವೈರಸ್ ದಾಳಿ: ಹಲವಾರು ವಿಮಾನಗಳು ಸ್ಥಗಿತ