ಮಸೀದಿಯಲ್ಲೂ ಸಾವರ್ಕರ್ ಫೋಟೋ ಹಾಕಬೇಕು: ಶಾಸಕ ರೇಣುಕಾಚಾರ್ಯ
ಬೆಂಗಳೂರು: ಗಣೇಶೋತ್ಸವಕ್ಕೆ ಕಂದಾಯ ಇಲಾಖೆ ಅನಗತ್ಯ ರೂಲ್ಸ್ ಹಾಕಿದ್ದಾರೆ. ಇದು ಸರಿ ಅಲ್ಲ ರೂಲ್ಸ್ ಬದಲಿಸಬೇಕು ಎಂದು ಶಾಸಕ ರೇಣುಕಾಚಾರ್ಯ ತಮ್ಮ ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಜೊತೆ ಕಂದಾಯ ಸಚಿವರ ಜೊತೆ ಮಾತನಾಡುತ್ತೇನೆ. ಮುಸ್ಲಿಮರು ಅವರ ಹಬ್ಬದ ದಿನ ಮೆರವಣಿಗೆ ಮಾಡಲ್ವಾ..?ನಾವು ಹಿಂದುಗಳಾಗಿ ಮಾಡಬಾರದಾ..? ಎಂದು ಪ್ರಶ್ನಿಸಿದರು.
ಬಾಲಗಂಗಾಧರ್ ನಾಥರು ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ತಂದ ಆಚರಣೆ ಇದು. ಬ್ರಿಟಿಷ್ ಕಾಲದಿಂದ ಆಚರಣೆ ಆಗುತ್ತಿದೆ. ಈಗ ಯಾಕೆ ಮಾಡಬಾರದು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಾವರ್ಕರ್ ಫೋಟೋ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಎಲ್ಲಾ ಕಡೆ ಹಾಕಬೇಕು. ಮಸೀದಿಯಲ್ಲೂ ಹಾಕಬೇಕು. ಯಾಕೆ ಹಾಕಬಾರದು ಅವರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲವೇ..? ಎಂದು ಪ್ರಶ್ನಿಸಿದರು.
ಮುಸ್ಲಿಮರು ಸತ್ತವರ ಫೋಟೋವನ್ನೇ ಮನೆಯಲ್ಲಿ ಹಾಕಲ್ಲ. ಈಗ ಟಿಪ್ಪುನಂತಹ ದೇಶದ್ರೋಹಿಯನ್ನು ಜಯಂತಿ ಹೆಸರಲ್ಲಿ ವಿಜೃಂಭಣೆ ? ಎಂದು ಕಿಡಿಕಾರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka