ಶಾಕಿಂಗ್ ನ್ಯೂಸ್: ಬಳಸಿ ಎಸೆದ ಮಾಸ್ಕ್ ಗಳಿಂದ ಬೆಡ್ ತಯಾರಿಸುತ್ತಿರುವ ಕಾರ್ಖಾನೆಗಳು

masks
13/04/2021

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸಂಕಷ್ಟದ ನಡುವೆಯೇ ಘಟನೆಯೊಂದು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕವನ್ನುಂಟು ಮಾಡಿದೆ. ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಕಾರ್ಖಾನೆಗಳು  ಮಾಡಿರುವ ಘನಂಧಾರಿ ಕೆಲಸಗಳಿಂದ ಇದೀಗ ಜನರು ನೆಮ್ಮದಿನಿಂದ ನಿದ್ರಿಸಲೂ ಭಯಪಡುವಂತಾಗಿದೆ.

ಹೌದು…! ಮಹಾರಾಷ್ಟ್ರದ ಹಾಸಿಗೆ ಉತ್ಪಾದನಾ ಕೇಂದ್ರದಲ್ಲಿ ಹಾಸಿಗೆಯೊಳಗೆ ಹತ್ತಿಯ ಬದಲು ಬಳಸಿ ಎಸೆಯಲಾಗಿರುವ ಮಾಸ್ಕ್ ಗಳನ್ನು ತುಂಬಿ ಹಾಸಿಗೆ ತಯಾರಿಸಲಾಗುತ್ತಿರುವುದು ಪತ್ತೆಯಾಗಿದೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ಪೊಲೀಸ್ ಠಾಣೆಗೆ ಬಂದ ದೂರೊಂದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದ್ದು, ಬಳಸಿ ಎಸೆದ ಮಾಸ್ಕ್ ಗಳನ್ನು ಬಳಸಿ ಹಾಸಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ  ಕಾರ್ಖಾನೆ ಮಾಲಿಕ ಅಮ್ಜದ್ ಅಹ್ಮದ್ ಮನ್ಸೂರಿ ವಿರುದ್ಧ ದೂರು ದಾಖಲಿಸಲಾಗಿದೆ. ಇದರ ಬೆನ್ನಲ್ಲೇ  ಎಂಐಡಿಸಿಯ ಕುಸುಂಬಾ ಗ್ರಾಮದಲ್ಲಿರುವ ಕಾರ್ಖಾನೆಗಳಲ್ಲಿಯೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version