ಬಜಪೆ: ಕರಂಬಾರು ಶಾಲಾ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ
ಬಜಪೆ: ಪ್ರಾಥಮಿಕ ಆರೋಗ್ಯ ಕೇಂದ್ರ ಬೋಂದೆಲ್, ಹಳೆ ವಿದ್ಯಾರ್ಥಿ ಸಂಘ (ರಿ.) ಕರಂಬಾರು, ಶ್ರೀನಿವಾಸ್ ಮೆಡಿಕಲ್ ಕಾಲೇಜು,ರೋಟರಿ ಕ್ಲಬ್ ಡೌನ್ ಟೌನ್ ಇವರ ಸಹಯೋಗ ದೊಂದಿಗೆ ಬೃಹತ್ ರಕ್ತದಾನ ಶಿಬಿರ ಕರಂಬಾರು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಅಧ್ಯಕ್ಷರಾದ ಗಣೇಶ್ ಪ್ರಭು ವಹಿಸಿದ್ದರು.
ಪ್ರಾಥಮಿಕ ಅರೋಗ್ಯ ಕೇಂದ್ರದ ಆರೋಗ್ಯಧಿಕಾರಿ ಡಾ.ಸವಿತಾ ಎಸ್. ಜಿ. ಮಾತನಾಡಿ, ರಕ್ತದಾನ ಶ್ರೇಷ್ಠ ದಾನ, ಎಲ್ಲರೂ ರಕ್ತ ದಾನ ಮಾಡಿ ಜೀವ ದಾನ ಮಾಡಿ. ರಕ್ತ ದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದರಲ್ಲದೇ ಕರಂಬಾರು ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಮಹತ್ತರವಾದದ್ದು ಎಂದು ಇದೇ ವೇಳೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಉಮೇಶ್ ಗಟ್ಟಿ ( ಕಾರ್ಯದರ್ಶಿ ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು.), ಡಾ,ಪವನ್ ಚಂದ್ ( ಶ್ರೀನಿವಾಸ್ ಮೆಡಿಕಲ್ ಕಾಲೇಜು HOD micro biology ), ಡಾ, ಮಧುಕರ್ ( ಶ್ರೀನಿವಾಸ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಾ ಮೆಡಿಕಲ್ ಆಫೀಸರ್ ), ಉಷಾಕಿರಣ ( ಮುಖ್ಯ ಶಿಕ್ಷಕಿ ಕರಂಬಾರು ಶಾಲೆ), ಲಕ್ಷ್ಮಣ್ ಬಂಗೇರ ( ಅಧ್ಯಕ್ಷರು ಮಹಾಲಕ್ಷ್ಮಿ ದೇವಸ್ಥಾನ ಕರಂಬಾರು,) ಶೇಖರ್ ಪೂಜಾರಿ ( ಅಧ್ಯಕ್ಷರು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು, ಭರತ್ ಪೂಜಾರಿ ( ಅಧ್ಯಕ್ಷರು ಯುವ ವಾಹಿನಿ ಕರಂಬಾರು ಕೆಂಜಾರು ), ಉಮೇಶ್ ಶೆಟ್ಟಿ ( ಅಧ್ಯಕ್ಷರು ನವಶಕ್ತಿ ಸೇವಾ ಸಂಘ ಮರವೂರು ), ಸುಧೀರ್ ಪೂಜಾರಿ ( ಅಧ್ಯಕ್ಷರು ತುಳುನಾಡ ತುಳುವೆರ ತುಡರ್ ಫ್ರೆಂಡ್ಸ್ ಕರಂಬಾರು.) ಶಿವಪ್ರಸಾದ್ ಪೂಜಾರಿ, ( ಅಧ್ಯಕ್ಷರು ಸ್ವಸ್ತಿಕ್ ಫ್ರೆಂಡ್ಸ್ ಕೆಂಜಾರು.) ರಾಕೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು, ಪ್ರವೀಣ್ ಆಚಾರ್ಯ ವಂದಿಸಿದರು, ಬೋಂದೆಲ್ ಅರೋಗ್ಯ ಕೇಂದ್ರ ದಿಂದ ಆಸಾಂಕ್ರಾಮಿಕ ರೋಗದ ಕ್ಯಾಂಪ್ ಮತ್ತು ಅಯುಷ್ಮಾನ್ ಭಾರತ್ ವಿಷಯ ವಾಗಿ ಕ್ಯಾಂಪ್ ನಲ್ಲಿ ತಿಳಿಸಲಾಯಿತು.