ಆ.10ರಂದು ಇಡೀ ದೇಶವೇ ಕಗ್ಗತ್ತಲಲ್ಲಿ ಮುಳುಗಲಿದೆ? | ದೇಶಾದ್ಯಂತ ವಿದ್ಯುತ್ ಸ್ಥಗಿತ!
ಬೆಂಗಳೂರು: ಆಗಸ್ಟ್ 10ರಂದು ದೇಶಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ವಿದ್ಯುಚ್ಛಕ್ತಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದು ವರದಿಯಾಗಿದ್ದು, ವಿದ್ಯುತ್ ಖಾಸಗಿಕರಣದ ವಿರುದ್ಧ ವಿದ್ಯುಚ್ಛಕ್ತಿ ನೌಕರರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ವಿದ್ಯುತ್ ಕಾಯ್ದೆ 2003ರ ತಿದ್ದುಪಡಿಯನ್ನು ಈ ಚಳಿಗಾಲದ ಅಧಿವೇಶನದಲ್ಲಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಧೋರಣೆಯನ್ನು ವಿರೋಧಿಸಿ ವಿದ್ಯುತ್ ನೌಕರರ ಅಸೋಸಿಯೇಷನ್ ನ ಒಕ್ಕೂಟದ ಎಲ್ಲ ಅಧಿಕಾರಿಗಳು, ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದಾರೆ.
ಇನ್ನೂ ಈ ಹೋರಾಟಕ್ಕೆ ಅಭಿವೃದ್ಧಿಪರ ಸಂಘಟನೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಲಿದ್ದು, ರೈತರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಗಸ್ಟ್ 10ರಂದು ಇಡೀ ದೇಶವೇ ಕಗ್ಗತ್ತಲಿನಲ್ಲಿ ಮುಳುಗಲಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಈಗಾಗಲೇ ಕೇಂದ್ರ ಸರ್ಕಾರವು ಬೃಹತ್ ಸಾರ್ವಜನಿಕ ವಲಯಗಳನ್ನು ಒಂದರ ಹಿಂದೊಂದರಂತೆ ಖಾಸಗಿಕರಣ ಮಾಡುತ್ತಲೇ ಇದೆ. ವಿಮಾನ ಸೇರಿದಂತೆ ಹಲವು ಸಾರ್ವಜನಿಕ ಸಂಸ್ಥೆಗಳು ಖಾಸಗಿಯವರ ಕೈಗೆ ಹೋಗಿದೆ. ಇದೀಗ ವಿದ್ಯುತ್ ಕಂಪೆನಿ ಕೂಡ ನಷ್ಟದಲ್ಲಿದೆ ಎಂಬ ನೆಪದಲ್ಲಿ ವಿದ್ಯುತ್ ಕಂಪೆನಿಯನ್ನೂ ಖಾಸಗಿ ಸಂಸ್ಥೆಗಳಿಗೆ ಮಾರಲು ಕೇಂದ್ರ ಸರ್ಕಾರ ಹೊರಟಿದ್ದು, ಇದರ ವಿರುದ್ಧ ವಿದ್ಯುತ್ ನೌಕರರು ತಿರುಗಿ ಬಿದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್
ಪೊಲೀಸರ ವಿರುದ್ಧ ತಿರುಗಿ ಬಿದ್ದ ಆಫ್ರಿಕಾ ಪ್ರಜೆಗಳು | ಲಾಠಿ ರುಚಿ ತೋರಿಸಿದ ಪೊಲೀಸರು
200 ರೂಪಾಯಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾದ ಬೈಕ್ ಸವಾರರು!
ಒಂದು ದೇಹದಲ್ಲಿ ಎರಡು ಜೀವ | ಸರ್ಕಾರ ಮತ್ತು ಕಾನೂನಿಗೆ ಸವಾಲಾದ ಸಹೋದರರು