ವಕ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ: ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನಾ ಸಭೆ

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಕೊಲ್ಕತ್ತಾದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಜೊತೆಗೂಡಿ ಪ್ರತಿಭಟನೆ ನಡೆಸಿದವು. ಬಿಜೆಪಿಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಮತ್ತು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದಾಗ ಅದರ ವಿರುದ್ಧ ಮತ ಚಲಾಯಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಮಸೂದೆಯ ವಿರುದ್ಧ ಮಾರ್ಚ್ 13ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಸಲಿರುವ ಬೃಹತ್ ಪ್ರತಿಭಟನಾ ಸಭೆಗೆ ಪೂರಕವಾಗಿ ಈ ಸಭೆಯನ್ನು ಏರ್ಪಡಿಸಲಾಗಿತ್ತು.
ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಯಾವ ನಡೆಗಳನ್ನು ಕೈಗೊಳ್ಳಬೇಕು ಅನ್ನುವುದನ್ನ ದೆಹಲಿಯ ಜಂತರ್ ಮಂತರ್ ಸಭೆಯ ಬಳಿಕ ಘೋಷಿಸಲಾಗುವುದು ಎಂದು ಈ ಸಭೆಯಲ್ಲಿ ಭಾಗವಹಿಸಿದ ನಾಯಕರು ತಿಳಿಸಿದ್ದಾರೆ.
ದೇಶದಲ್ಲಿ ಸ್ವಯಂ ಅಧಿಕಾರ ಹೊಂದಿರುವ ಬೋರ್ಡ್ ಕೇವಲ ವಕ್ಫ್ ಬೋರ್ಡ್ ಮಾತ್ರ ಅಲ್ಲ, ಇತರ ಸಮುದಾಯಗಳಿಗೂ ಇಂತಹ ಸ್ವಯಂ ಅಧಿಕಾರವುಳ್ಳ ಬೋರ್ಡ್ ಗಳಿವೆ. ಆದರೆ ಪ್ರಭುತ್ವ ಈ ಕುರಿತಂತೆ ಸುಳ್ಳು ಪ್ರಚಾರವನ್ನು ಹಬ್ಬಿಸಿದೆ. ಮುಸ್ಲಿಮರಿಗೆ ಮಾತ್ರ ಸ್ವಯಂ ಅಧಿಕಾರದ ಬೋರ್ಡ್ ಇದ್ದು ಅದನ್ನು ನಾವು ಬದಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದೆ ಎಂದು ಸಭೆಯಲ್ಲಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸಭೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಪಶ್ಚಿಮ ಬಂಗಾಳದ ಅಮೀರ್ ಡಾಕ್ಟರ ಮಶೀರ್ ರಹಮಾನ್, ಎಸ್ಐಓ ರಾಜ್ಯಾಧ್ಯಕ್ಷ ಇಮ್ರಾನ್ ಹುಸೇನ್, ಅಹ್ಲೆ ಹದೀಸ್ ರಾಜ್ಯ ಕಾರ್ಯದರ್ಶಿ ಮೌಲಾನಾ ಮಹ್ ರೂಫ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಲಾ ಬೋರ್ಡ್ ಸದಸ್ಯ ಮೌಲಾನ ಅಬು ತಾಲಿಬ್ ರಹ್ ಮಾನಿ ಮುಂತಾದವರು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj