ಮಾಟ ಮಂತ್ರದ ಕಾರಣ ನೀಡಿ, ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರಿಗೆ ತಲವಾರು ಬೀಸಿದ ಯುವಕ | ಓರ್ವ ಮಹಿಳೆ ಸ್ಥಿತಿ ಗಂಭೀರ
ಮಂಗಳೂರು: ತನ್ನ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಆರೋಪಿಸಿದ ವ್ಯಕ್ತಿಯೋರ್ವ ಸರ್ಕಾರಿ ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ವಿನಾಃ ಕಾರಣ ತಲವಾರಿನಿಂದ ದಾಳಿ ನಡೆಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನವೀನ್ ಶೆಟ್ಟಿ ಎಂಬಾತ ಈ ಕೃತ್ಯ ನಡೆಸಿರುವ ಆರೋಪಿಯಾಗಿದ್ದು, ಘಟನೆ ನಡೆದ ಬಳಿಕ ಮಂಗಳೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನೂ ಈತನನ್ನು ವಿಚಾರಣೆ ನಡೆಸಿದ ವೇಳೆ, ಲೆಕ್ಚರರ್ ವೀಣಾ, ನನ್ನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುವಾಗ ನನ್ನನ್ನು ಅವಮಾನಿಸಿ, ಕಿರುಕುಳ ನೀಡುತ್ತಿದ್ದರು. ಅವರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದರಿಂದಾಗಿ ನನಗೆ ತೊಂದರೆಗಳಾಗುತ್ತಿವೆ ಎಂದು ಹೇಳಿದ್ದಾನೆನ್ನಲಾಗಿದೆ.
ಅವರು ಮಾಡಿರುವ ಬ್ಲ್ಯಾಕ್ ಮ್ಯಾಜಿಕ್ ನ್ನು ತೆಗೆಯುವಂತೆ ಹೇಳಲು ಕಚೇರಿಗೆ ಬಂದಿದ್ದೆ. ಆದರೆ ವೀಣಾ ಆಫೀಸ್ ಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಕೋಪಗೊಂಡು ಹಲ್ಲೆ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ.
ಸರ್ಕಾರಿ ಕಚೇರಿಗೆ ನುಗ್ಗಿದ್ದ ಆರೋಪಿ ನವೀನ್ ಶೆಟ್ಟಿ, ಅಲ್ಲಿದ್ದ ನಿರ್ಮಲಾ, ರೀನಾ ರಾಯ್ ಹಾಗೂ ಗುಣವತಿ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದು, ಗಾಯಗೊಂಡವರಲ್ಲಿ ನಿರ್ಮಲಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಮೌಢ್ಯಾಚರಣೆಯನ್ನು ನಿಷೇಧ ಮಾಡಬೇಕಿದೆ. ಇತ್ತೀಚೆಗಂತೂ, ಮೌಢ್ಯದ ಹೆಸರಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯಲು ಆರಂಭವಾಗಿದೆ. ಇದು ಹೀಗೆ ಮುಂದುವರಿದರೆ, ವಿನಃ ಕಾರಣ ಜನರು ಅಪಾಯಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ತರಲು ಚರ್ಚಿಸಲಾಗಿತ್ತು. ಆದರೆ, ಅಂದು ಬಿಜೆಪಿ ಪಕ್ಷದ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಮಂತ್ರವಾದಿಯ ಮಾತು ನಂಬಿ, ನಿಧಿಗಾಗಿ ಮನೆಯೊಳಗೆ 20 ಅಡಿ ಗುಂಡಿ ತೋಡಿದ!
ದೆವ್ವ ಬಿಡಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು 16ರ ಬಾಲಕಿಯ ಮೇಲೆ ಸಾಧುವಿನಿಂದ ಅತ್ಯಾಚಾರ!
2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು
ಸುಳ್ಳು ಜಾತಿ ಪ್ರಮಾಣ ಪತ್ರ: ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್
ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ
ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು!
ಅಶ್ಲೀಲ ವಿಡಿಯೋ ಪ್ರಕರಣ: 2 ತಿಂಗಳ ಜೈಲುವಾಸದ ಬಳಿಕ ರಾಜ್ ಕುಂದ್ರಾಗೆ ಜಾಮೀನು