ಮಾಟಗಾತಿ ಎಂದು ಆರೋಪಿಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ಗ್ರಾಮಸ್ಥರು!
ಬಿಹಾರ: ಮಹಿಳೆಯನ್ನು ಮಾಟಗಾತಿ ಎಂದು ಆರೋಪಿಸಿ ನಿರಂತರ ಕಿರುಕುಳ ನೀಡಿ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಭೀಕರ ಘಟನೆ ಬಿಹಾರದ ನವಾಡದಲ್ಲಿ ನಡೆದಿದೆ.
ಊರಿನಲ್ಲಿ ನಡೆಯುತ್ತಿರುವ ಕೆಟ್ಟ ಘಟನೆಗಳಿಗೆ ಮಾಟಗಾತಿ ಮಹಿಳೆಯೇ ಕಾರಣ, ಊರು ನಾಶವಾಗಲು ಆಕೆ ಮಾಟ ಮಾಡುತ್ತಿದ್ದಾಳೆ ಎಂದು ಆರೋಪಿಸಿದ ಮೂಢ ಜನರು ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಭೀಕರ ಹತ್ಯೆ ಮಾಡಿದ್ದಾರೆ.
ಬೆಂಕಿಯಿಂದ ಧಗಧಗವಾಗಿ ಉರಿಯುತ್ತಿದ್ದ ಮಹಿಳೆ, ಪ್ರಾಣ ರಕ್ಷಿಸಿಕೊಳ್ಳಲು ಕೆರೆಗೆ ಹಾರಿದ್ದು, ಆದರೂ ಆಕೆಯ ಪ್ರಾಣ ಉಳಿಯಲಿಲ್ಲ ಎಂದು ತಿಳಿದು ಬಂದಿದೆ.
ಊರಿನ ಜನರ ಮೌಢ್ಯತೆಗೆ ಅಮಾಯಕ ಜೀವವೊಂದು ಬಲಿಯಾಗಿದೆ. ಈ ಹಿಂದಿನಿಂದಲೂ ಈ ಮಹಿಳೆಗೆ ಗ್ರಾಮಸ್ಥರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಊರಿನಲ್ಲಿ ಯಾರಿಗಾದರೂ ಕಾಯಿಲೆ ಬಂದರೆ, ಅದಕ್ಕೆ ಈ ಮಹಿಳೆಯೇ ಕಾರಣ ಎಂದು ಆರೋಪಿಸಿ ಮನೆಗೆ ಬಂದು ಥಳಿಸುತ್ತಿದ್ದರು ಎನ್ನಲಾಗಿದೆ.
ಗುರುವಾರವೂ ಮಹಿಳೆಯ ಮನೆಗೆ ನುಗ್ಗಿದ ಕೆಲವರು ಮಹಿಳೆಗೆ ಮಾರಣಾಂತಿಕವಾಗಿ ಥಳಿಸಿ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದಾರೆ. ತಡೆಯಲು ಬಂದ ಮಹಿಳೆಯರ ಸಂಬಂಧಿಕರ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಜೌರಿ ಪೊಲೀಸ್ ಠಾಣೆಗೆ ಮಹಿಳೆಯ ಸಂಬಂಧಿಕರು ದೂರು ನೀಡಿದ್ದಾರೆ. ಪೊಲೀಸರು ಯಾವ ಕ್ರಮಕೈಗೊಂಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳ ಲಭ್ಯವಾಗಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಾಯಿಯ ಮೇಲೆ ಜೀಪ್ ಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ
ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಅಭ್ಯರ್ಥಿ ಹೃದಯಾಘಾತದಿಂದ ಸಾವು
ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರನ ದಾರುಣ ಸಾವು
ಹಿಜಾಬ್ ಧರಿಸುತ್ತೇವೆ, ಪ್ರತ್ಯೇಕ ಕೊಠಡಿಯಲ್ಲಿ ಪಾಠ ಕೇಳಲ್ಲ | ವಿದ್ಯಾರ್ಥಿನಿಯರಿಂದ ಪಟ್ಟು
ಕೇಸರಿ ಧ್ವಜ ಹಾರಿಸುತ್ತೇನೆಂದು ಈಶ್ವರಪ್ಪ ಹೇಳಿಲ್ಲ | ಕುಮಾರಸ್ವಾಮಿ