ತೈಲ ಬೆಲೆ ಏರಿಕೆಯ ಬಳಿಕ ಮತ್ತೊಂದು ಶಾಕ್: ಬೆಂಕಿ ಪೊಟ್ಟಣದ ಬೆಲೆಯೂ ಏರಿಕೆ!
ನವದೆಹಲಿ: ಕಂಪ್ಯೂಟರ್ ಯುಗ ಹೋಗಿ ‘ಬೆಲೆ ಏರಿಕೆ ಯುಗ’ ಬಂದೇ ಬಿಟ್ಟಿತೇ? ಎಂದು ಜನರು ಶಂಕಿಸುವ ಮಟ್ಟಲ್ಲಿ ದೇಶದ ಪ್ರತಿಯೊಂದು ವಸ್ತುಗಳಿಗೂ ಬೆಲೆ ಏರಿಕೆಯಾಗುತ್ತಲೇ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಒಂದೊಂದೆ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ನಡುವೆಯೆ ಬೆಂಕಿ ಪೊಟ್ಟಣದ ಬೆಲೆ ಕೂಡ ಶೀಘ್ರದಲ್ಲಿಯೇ ಏರಿಕೆಯಾಗಲಿದೆ.
ಬರೊಬ್ಬರಿ 14 ವರ್ಷಗಳ ಬಳಿಕ ಇದೀಗ ಬೆಂಕಿ ಪೊಟ್ಟಣದ ಬೆಲೆ ಏರಿಕೆಯ ಸುಳಿವು ಲಭ್ಯವಾಗಿದೆ. ಮಾಹಿತಿಯ ಪ್ರಕಾರ, ಡಿಸೆಂಬರ್ 1, 2021ರಿಂದ 1 ರೂಪಾಯಿ ಇದ್ದ ಬೆಂಕಿ ಪೊಟ್ಟಣದ ಬೆಲೆ 2 ರೂಪಾಯಿ ಆಗಲಿದೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ 1 ರೂಪಾಯಿಗೆ ಬೆಂಕಿ ಪೊಟ್ಟಣ ನೀಡಲಾಗುತ್ತಿಲ್ಲ. ಹಣದುಬ್ಬರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾರಿಗೆ ವೆಚ್ಚಗಳಿಂದಾಗಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಬೆಂಕಿ ಪೊಟ್ಟಣ ಕಂಪೆನಿಗಳು ಹೇಳಿವೆ.
2007ರಲ್ಲಿ ಬೆಂಕಿ ಪೊಟ್ಟಣ ಬೆಲೆ ಏರಿಕೆಯಾಗಿತ್ತು. 2007ರಲ್ಲಿ 50 ಪೈಸೆಯಿಂದ 1 ರೂಪಾಯಿಗೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಡಿಸೆಂಬರ್ 1ರಿಂದ 1 ರೂಪಾಯಿಯಿಂದ 2 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ. ಪೊಟಾಸಿಯಂ ಕ್ಲೋರೇಟ್, ಕಾಕದ ಸ್ಪ್ಲಂಟ್ ಮತ್ತು ಗಂಧಕದ ಬೆಲೆ ಅಕ್ಟೋಬರ್ ತಿಂಗಳಿನಿಂದ ಹೆಚ್ಚಾಗಿದೆ. ಹೀಗಾಗಿ ಬೆಂಕಿ ಪೊಟ್ಟಣದ ಉತ್ಪಾದನಾ ವೆಚ್ಚ ಕೂಡ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನಿಧಿಯ ಆಸೆಗೆ ಪತ್ನಿಯನ್ನು ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ ವೈದ್ಯ!
ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸಂಸ್ಥಾಪಕ ಸಿ.ಎನ್.ನಾಗೇಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ
ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು!
ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ!
ಸಿದ್ದರಾಮಯ್ಯನವರನ್ನು ಶೀಘ್ರವೇ ಆಫ್ಘಾನಿಸ್ತಾನಕ್ಕೆ ಕಳುಹಿಸಬೇಕು | ವಿ.ಶ್ರೀನಿವಾಸ್ ಪ್ರಸಾದ್
ಚುನಾವಣೆಗೋಸ್ಕರ ಆರೆಸ್ಸೆಸ್, ವಿಎಚ್ ಪಿ ಬಗ್ಗೆ ಮಾತನಾಡುವುದು ಸರಿಯಲ್ಲ: ವಿಶ್ವಪ್ರಸನ್ನ ಸ್ವಾಮೀಜಿ
“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು