ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ - Mahanayaka
3:56 AM Wednesday 11 - December 2024

ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ

shivacharya swamiji
25/07/2021

ಬೆಂಗಳೂರು:  ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಅಧಿಕಾರ ನೀಡಿದಂತೆಯೇ ರಾಜ್ಯದಲ್ಲಿಯೂ ಮಠಾಧೀಶರನ್ನು ಸಿಎಂ ಆಗಿ ನೇಮಕ ಮಾಡಿ ಎಂದು ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದು, ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿರುವ ಸಂದರ್ಭದಲ್ಲಿಯೇ ಮಠಾಧಿಪತಿಗಳನ್ನು ಸಿಎಂ ಮಾಡಬೇಕು ಎನ್ನುವ ಒತ್ತಾಯ ಸ್ವಾಮೀಜಿಗಳಿಂದ ಕೇಳಿ ಬಂದಿದೆ.

ಉತ್ತರಪ್ರದೇಶದಂತೆ ನಮ್ಮ ರಾಜ್ಯದಲ್ಲಿಯೂ ಮಠಾಧೀಶರನ್ನು ಮುಖ್ಯಮಂತ್ರಿ ಮಾಡಿ ಎಂದು ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದು, ರಾಜ್ಯದಲ್ಲಿ ಹಲವಾರು ಜಾತಿ ವ್ಯವಸ್ಥೆ ಇದೆ. ಆ ಜಾತಿಯಲ್ಲಿ ಮಠಾಧೀಶರು ಕೂಡ ಇದ್ದಾರೆ. ಯಾವುದೇ ಧರ್ಮವಿರಲಿ, ಅವರು ಧರ್ಮವನ್ನು ಉಳಿಸಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಧರ್ಮವನ್ನು ಕಾಪಾಡಲು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಕೂಡ ಯೋಗ್ಯ ಗುರುಗಳನ್ನು ಆಯ್ಕೆ ಮಾಡಿ ಯೋಗಿಯನ್ನ ಸಿಎಂ ಆಗಿ ನೇಮಕ ಮಾಡಿ ಎಂದು ತಿಳಿಸಿದ್ದಾರೆ.

ಸರ್ವಸಂಗ ಪರಿತ್ಯಾಗಿ ಎಂದು ಹೇಳುತ್ತಿರುವ ಸ್ವಾಮೀಜಿಗಳಿಗೆ, ಮಠಾಧೀಶರಿಗೆ ಅಧಿಕಾರ ಯಾಕೆ? ಅವರು ಯಾಕೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ? ಎಂದು ಕಳೆದ ಕೆಲವು ದಿನಗಳಿಂದ ಭಾರೀ ವಿರೋಧಗಳು ಕೇಳಿ ಬರುತ್ತಿದೆ. ಈ ನಡುವೆ ಮಠಾಧಿಪತಿಗಳು ಸಿಎಂ ಕನಸು ಕಾಣುತ್ತಿದ್ದು, ಇದ್ಯಾಕೋ ಮಠಾಧಿಪತಿಗಳ ದುರಾಸೆ ಅತಿಯಾಯ್ತು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ