“ಮಠಕ್ಕೆ ಬಂದು ತತ್ತಿ ತಂತೀವಿ” | ಮೊಟ್ಟೆ ವಿರೋಧಿ ಮಠಾಧೀಶರ ಬೆಂಡೆತ್ತಿದ ಮಕ್ಕಳು - Mahanayaka
4:34 AM Thursday 14 - November 2024

“ಮಠಕ್ಕೆ ಬಂದು ತತ್ತಿ ತಂತೀವಿ” | ಮೊಟ್ಟೆ ವಿರೋಧಿ ಮಠಾಧೀಶರ ಬೆಂಡೆತ್ತಿದ ಮಕ್ಕಳು

egg
12/12/2021

ಗಂಗಾವತಿ: ಅಪೌಷ್ಠಿಕತೆಯಿಂದ ಬಳಲುತ್ತಿರುವ ಕೆಲವು ಜಿಲ್ಲೆಗಳ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರ ವಿರುದ್ಧ ಕೆಲವು ಸ್ವಾಮೀಜಿಗಳು ತೊಡೆತಟ್ಟಿ ಯುದ್ಧಕ್ಕೆ ನಿಂತಿರುವುದರ ವಿರುದ್ಧ ಇದೀಗ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೇ ಸಂದರ್ಭದಲ್ಲಿ ಜಾತ್ಯತೀತ ಸಿದ್ಧಾಂತ ಹೇಳಿಕೊಂಡು ತಿರುಗಾಡುತ್ತಿರುವ ನಾಯಕರು ಮಠಾಧೀಶರಿಗೆ ಹೆದರಿ ಒಂದಕ್ಷರ ಮಾತನಾಡದಿರುವಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಮಾತನಾಡಿ, ಮಠಾಧೀಶರ ಬೆಂಡೆತ್ತಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಂಗಾವತಿಯಲ್ಲಿ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಮೊಟ್ಟೆ ಬೇಡ ಎಂದು ವಿತಂಡವಾದಕ್ಕಿಳಿದಿರುವ ಮಠಾಧೀಶರ ನಡೆಯ ವಿರುದ್ಧ ತೀವ್ರ ಹೊರ ಹಾಕಿದ್ದು, ಆಕೆಗೆ ಸಹಪಾಠಿಗಳು ಧ್ವನಿಗೂಡಿಸಿದ್ದಾರೆ.

“ನೀವೇನಾರಾ ತತ್ತಿ ಕೊಡಬ್ಯಾಡ್ರಿ ಬಾಳೆ ಹಣ್ಣು ಕೊಡಿ ಅಂದ್ರೆ ನಿಮ್ ಮಠದಾಗೆ ಬಂದು ಕೂತು ತತ್ತಿ ತಿಂದ್ ಹೋಗ್ತೀವಿ ಬೇಕಾ ಇದ್ ನಿಮ್ಗೆ ? ಬ್ಯಾಡ ಅಲಾ?” ಎಂದು ತಮ್ಮ ಹಸಿವಿನ ಸಂಕಟವನ್ನು ವಿದ್ಯಾರ್ಥಿನಿ ಮಠಾಧೀಶರಿಗೆ ತಿಳಿಸಲು ಮುಂದಾಗಿದ್ದಾಳೆ. “ಮಕ್ಳು ಅಂದ್ರೆ ದೇವ್ರೂ ಅಂತೀರಿ ಮತ್ಯಾಕ್ ನಮ್ ತಂಟಿಗ್ ಬರ್ತೀರಿ ? ನಾವ್ಯಾಕ್ ಸರ್ಕಾರಿ ಶಾಲಿಗ್ ಬತ್ತೀವಿ ಗೊತ್ತಾ ? ಮನೇಲ್ ಕಷ್ಟ ಇದೆ ಅದ್ಕೆ” ಎಂದು ಕಲ್ಲು ಮನಸ್ಸುಗಳಿಗೆ ಪೌಷ್ಠಿಕತೆಯ ಕರಾಳತೆಯನ್ನು ಅರ್ಥ ಮಾಡಿಸಲು ಯತ್ನಿಸಿದ್ದಾಳೆ.

“ನಾವು ಮನೇಲ್ ತತ್ತಿ ತಿಂದ್ಕೊಂಡ್ ಸ್ನಾನಾ ಮಾಡಿ ನಿಮ್ ಮಠಕ್ ಬಂದ್ ಪೂಜೆ ಮಾಡ್ತೀವಿ. ಕಾಣಿಕೆ ಹಾಕ್ತೀವಿ ಅದಾಗುತ್ತಾ ನಿಮ್ಗೆ? ಬಿಸಾಕ್ರಿ ಆ ದುಡ್ಡನ್ನ, ನಿಮ್ಗೆ ಬಡೋರ್ ಕಷ್ಟ ಗೊತ್ತಿಲ್ಲ. ಇಡೀ ಗಂಗಾವತಿ ಮಕ್ಳು ಬರ್ತೀವಿ” ಎಂದು ತಮ್ಮ ಆಹಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.




“ಮೊಟ್ಟೆಗೋಸ್ಕರ ನಾವು ರೋಡಿಗ್ ಬಂದು ವಿರೋಧ ಮಾಡ್ಬೇಕೇನ್ ನಿಮ್ಗ? ನಿಮ್ಗೆ ಚಲೂ ಅನಿಸ್ತಾ ಇದು? ನಿಮ್ ಮಕ್ಳಿಗ್ ಹಿಂಗೆ ಮಾಡಿದ್ರ ನಿಮ್ಗೆ ಸರಿ ಅನ್ನಿಸುತ್ತಾ? ಇಲ್ಲಲ್ಲಾ? ನಮಿಗ್ ಮೊಟ್ಟೆ ಬೇಕು, ಬಾಳೆಹಣ್ಣು ಬೇಕು. ನೀವ್ ಏನಾದ್ರು ಮಾಡಿ, ಇಲ್ಲಂದ್ರ ನಿಮ್ ಮಠದಾಗ ಬಂದು ತತ್ತಿ ತಿಂತಿವಿ ನೋಡ್ರಿ… ಬೇಕಾ? ಬೇಡಲ್ಲಾ? ನಮಗೆ ತತ್ತಿ ಕೊಡಬೇಕು, ಬಾಳೆ ಹಣ್ಣು ಕೊಡ್ಬೇಕು. ಒಂದಲ್ಲ ಎರಡು ತಿಂತಿವಿ ನಾವ್, ನೀವ್ಯಾರು ಕೇಳೋಕೆ?” ಎಂದು ವಿದ್ಯಾರ್ಥಿನಿ ಧೈರ್ಯದಿಂದ ಪ್ರಶ್ನಿಸಿದ್ದಾಳೆ.

ಮೊಟ್ಟೆಗೆ ವಿರೋಧ ಮಾಡುವವರು ಮೊದಲು ಈ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಲಿ. ಸ್ವಾಮೀಜಿಗಳಿಗೆ ಶಾಸ್ತ್ರದ ಚಿಂತೆಯಾದರೆ, ಮಕ್ಕಳಿಗೆ ಅವರ ಹಸಿವಿನ, ಆರೋಗ್ಯದ ಚಿಂತೆಯಾಗಿದೆ. ನಮ್ಮ ಮಕ್ಕಳು ಮೊಟ್ಟೆ ತಿನ್ನಲ್ಲ ಹಾಗಾಗಿ ಅವರ ಮಕ್ಕಳೂ ಮೊಟ್ಟೆ ತಿನ್ನಬಾರದು ಎನ್ನುವ ಮನಸ್ಥಿತಿ ಎಷ್ಟರ ಮಟ್ಟಿಗೆ ಸರಿ?  ಎಂದು ಪ್ರಜ್ಞಾವಂತರು ಕೂಡ ಪ್ರಶ್ನಿಸುತ್ತಿದ್ದಾರೆ. ಬಹಳಷ್ಟು ಸಸ್ಯಾಹಾರಿಗಳೇ, ಮಠಾಧೀಶರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಟ್ ಕಾಯಿನ್ ಹಗರಣದ ಸೂತ್ರಧಾರ ‘ಶ್ರೀಕೃಷ್ಣ’ ಕರ್ನಾಟಕದಿಂದ ಪರಾರಿ?

ನಾಡೋಜ ಕವಿ ದಿ.ಸಿದ್ಧಲಿಂಗಯ್ಯ ಅವರ ಸಹಧರ್ಮಿಣಿ ರಮಾದೇವಿಯವರು ಇಂದು ಕಾಸರಗೋಡಿಗೆ

ಅಂತರ್ ಧರ್ಮೀಯ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಹಲ್ಲೆ: ನಾಲ್ವರು ಆರೋಪಿಗಳ ಬಂಧನ

ಮಕ್ಕಳು ಅಪೌಷ್ಠಿಕತೆಯಿಂದ ತುಂಬಾ ಒದ್ದಾಡುತ್ತಿದ್ದಾರೆ | ಮೊಟ್ಟೆ ವಿರೋಧಕ್ಕೆ ಶಿಕ್ಷಣ ಸಚಿವರು ಹೇಳಿದ್ದೇನು?

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಮತಾಂತರಕ್ಕೆ ಯತ್ನಿಸಿರುವುದು ಪತ್ತೆ

ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿ ಬಿಡುಗಡೆ: ‘ಜೈ ಭೀಮ್’ಗೆ ಮೊದಲ ಸ್ಥಾನ

ಇತ್ತೀಚಿನ ಸುದ್ದಿ