ಮತಾಂತರದ ಆರೋಪ ಹೊರಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಬಜರಂಗದಳ ದಾಳಿ! - Mahanayaka
9:41 AM Friday 20 - September 2024

ಮತಾಂತರದ ಆರೋಪ ಹೊರಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಬಜರಂಗದಳ ದಾಳಿ!

khanpur
13/08/2021

ಕಾನ್ಪುರ: ಮತಾಂತರ ಮಾಡಲು ಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಮುಸ್ಲಿಮ್ ವ್ಯಕ್ತಿಯೋರ್ವನ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿ, ಜೈಶ್ರೀರಾಮ್ ಘೋಷಣೆಯನ್ನು ಬಲವಂತವಾಗಿ ಕೂಗಿಸಿದ ಘಟನೆ ಕಾನ್ಪುರದ ವರುಣ್ ವಿಹಾರ್ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಘಟನೆ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ  ಮುಸ್ಲಿಮ್ ವ್ಯಕ್ತಿಗೆ ಹಲ್ಲೆ ನಡೆಸುತ್ತಿರುವ ವೇಳೆ ಆತನ ಅಪ್ರಾಪ್ತ ವಯಸ್ಸಿನ ಬಾಲಕಿ ಅಳುತ್ತಾ, ತನ್ನ ತಂದೆಯನ್ನು ಏನೂ ಮಾಡಬೇಡಿ ಎಂದು ಅಂಗಲಾಚುತ್ತಿರುವ ದೃಶ್ಯವೂ ಸೆರೆಯಾಗಿದೆ.

ಅಫ್ತಾರ್ ಎಂಬ ವ್ಯಕ್ತಿಯು ಮತಾಂತರಕ್ಕೆ ಯತ್ನಿಸುತ್ತಿದ್ದಾನೆ ಎಂದು ನೆರೆಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಪೊಲೀಸರು ಕ್ರಮಕೈಗೊಳ್ಳದಿದ್ದಾಗ ಬಜರಂಗದಳವನ್ನು ಸಂಪರ್ಕಿಸಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಮುಸ್ಲಿಮ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯವರೆಗೂ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸುತ್ತಲೇ ಇದ್ದರು ಎಂದು ವರದಿಯಾಗಿದೆ.


Provided by

ಇನ್ನೂ ಮುಸ್ಲಿಮ್ ವ್ಯಕ್ತಿಗೆ ಹಲ್ಲೆ ನಡೆಸಿರುವ ಹೊಣೆಯನ್ನು ಹೊತ್ತಿರುವುದಾಗಿ ಬಜರಂಗದಳಡ ಸಂಘಟಕ ದಿಲೀಪ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ ಸ್ಥಳವನ್ನು ತೊರೆಯಬೇಕು ಎಂದು ಅಫ್ತಾರ್ ಕುಟುಂಬಸ್ಥರಿಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ಹೇಳಲಾಗಿದೆ.

ಇನ್ನೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಮ್ ಕುಟುಂಬ, ನಮ್ಮ ಮೇಲೆ ಅನಾವಶ್ಯಕವಾಗಿ ಮತಾಂತರದ ಆರೋಪವನ್ನು ಮಾಡಲಾಗಿದೆ. ನಾವು ಆ ರೀತಿ ಏನು ಮಾಡಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.

“ದಾಳಿಯ ದೃಶ್ಯವನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಸದ್ಯ ಹಲವು ಹೆಸರು ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಕಾನ್ಪುರ ದಕ್ಷಿಣ ಡಿಸಿಪಿ ರವೀನಾ ತ್ಯಾಗಿ ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ

ಮರಣ ಪ್ರಮಾಣ ಪತ್ರಗಳಲ್ಲಿಯೂ ಮೋದಿ ಫೋಟೋ ಹಾಕಿಸಿ | ಪ್ರಧಾನಿ ಮೋದಿ ವಿರುದ್ಧ ಮಮತಾ ಆಕ್ರೋಶ

ಆಹಾರದಲ್ಲಿ ವಿಷ ಬೆರೆಸಿ ತಂದೆ, ಅಣ್ಣ, ತಂಗಿಯನ್ನು ಕೊಂದ 15 ವರ್ಷದ ಬಾಲಕಿ

ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ, ಬಿಜೆಪಿ ಸಂಸ್ಕೃತಿ | ರಾಮಲಿಂಗಾರೆಡ್ಡಿ ತಿರುಗೇಟು

ಇತ್ತೀಚಿನ ಸುದ್ದಿ