ಮತಾಂತರದ ಸುಳ್ಳು ಆರೋಪ ಹೊರಿಸಿ, ಗುಂಪಿನಿಂದ ದಾಂಧಲೆ: ಕ್ರಮಕ್ಕೆ ಆಗ್ರಹ
ಉಡುಪಿ: ತಂಡವೊಂದು ಪ್ರಾರ್ಥನಾ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ, ಮತಾಂತರದ ಸುಳ್ಳು ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯನ್ನು ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳಕ್ಕೆ ಕೆಲವರು ಅಕ್ರಮವಾಗಿ ಪ್ರವೇಶಿಸಿ, ಮತಾಂತರದ ಸುಳ್ಳು ಆರೋಪ ಮಾಡಿದ್ದಾರೆ. ಕ್ರೈಸ್ತ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ, ಮತಾಂತರ ಮಾಡುತ್ತಿದ್ದೀರಿ ಎಂದು ಆರೋಪಿಸಿ ದೈಹಿಕ ಹಲ್ಲೆ ನಡೆಸಿ, ಬೆದರಿಕೆ ಹಾಕಲಾಗಿದ್ದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ ಎಂದು ಅವರು ಆರೋಪಿಸಿದರು.
ಇನ್ನೂ ಪ್ರಾರ್ಥನಾಲಯಕ್ಕೆ ದಾಳಿ ನಡೆಸಿದ ಗುಂಪನ್ನು ತಕ್ಷಣವೇ ಬಂಧಿಸಿ, ಕಾನೂನು ರೀತಿಯ ಶಿಕ್ಷೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಘಟನೆ ವಿವರ:
ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪಿಸಿ ಗುಂಪೊಂದು ಶುಕ್ರವಾರ ನಕ್ರೆ ಆನಂದಿ ಮೈದಾನದ ಪ್ರಗತಿ ಪ್ರಾರ್ಥನಾಲಯದ ಮೇಲೆ ದಾಳಿ ನಡೆಸಿತ್ತು. ಪ್ರಾರ್ಥನಾಲಯದ ಮುಖ್ಯಸ್ಥ ಬೆನಡಿಕ್ಟ್ ಎಂಬವರ ನೇತೃತ್ವದಲ್ಲಿ 60ಕ್ಕೂ ಅಧಿಕ ಮಹಿಳೆಯರು, ಹತ್ತಕ್ಕೂ ಹೆಚ್ಚು ಮಕ್ಕಳನ್ನು ಕೂಡಿ ಹಾಕಿಕೊಂಡು ಬಲವಂತವಾಗಿ ಪ್ರಾರ್ಥನೆ ಮಾಡಲಾಗುತ್ತಿದೆ ಎಂದು ತಂಡ ಆರೋಪಿಸಿತ್ತು.
ಆದರೆ ಮತಾಂತರದ ಆರೋಪವನ್ನು ಪ್ರಗತಿ ಪ್ರಾರ್ಥನಾಲಯದ ಮುಖಂಡ, ಬೆನೆಡಿಕ್ಟ್ ನಿರಾಕರಿಸಿದ್ದಾರೆ. ಪ್ರಗತಿ ಪ್ರಾರ್ಥನಾಲಯದಲ್ಲಿ ಕೇವಲ ಪ್ರಾರ್ಥನೆ ಮಾತ್ರ ನಡೆಯುತ್ತಿದೆ. ಯಾರನ್ನೂ ಬಲವಂತವಾಗಿ ಇಲ್ಲಿ ಕೂಡಿ ಹಾಕೋದಿಲ್ಲ. ಎಲ್ಲರೂ ಅವರ ಇಚ್ಛೆಯಂತೆ ಬಂದು ಪ್ರಾರ್ಥನೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಪ್ರಾರ್ಥನಾ ಕೇಂದ್ರಕ್ಕೆ ಆಗಮಿಸಿದ್ದ ಹಿಂದೂ ಮಹಿಳೆಯೊಬ್ಬರು ದಾಳಿ ನಡೆಸಿದ ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ಯಾರನ್ನೂ ಬಲವಂತವಾಗಿ ಕೂರಿಸಿಲ್ಲ. ನಾನು ಸ್ವ ಇಚ್ಛೆಯಿಂದ ಬಂದಿದ್ದೇನೆ. ಕಳೆದ ಹಲವು ವರ್ಷಗಳಿಂದ ನನಗೆ ಆರೋಗ್ಯ ಸಮಸ್ಯೆಯಿತ್ತು. ಮೈ ಮೇಲೆ ಪ್ರೇತಾಹ್ವಾನ ಆಗುತಿತ್ತು. ಇದಕ್ಕೆ ಪರಿಹಾರಕ್ಕಾಗಿ ಹಲವು ಹೋಮ ಹವನ ಮಾಡಿದ್ದೇನೆ. ತಲೆಗೆ ಚಿಕಿತ್ಸೆ ಕೂಡಾ ಪಡೆದಿದ್ದೇನೆ. ಆದರೆ ಗುಣಮುಖವಾಗಿರಲಿಲ್ಲ. ಆದರೆ ಈ ಪ್ರಾರ್ಥನಾ ಕೇಂದ್ರಕ್ಕೆ ಕಳೆದೊಂದು ವಾರದಿಂದ ಬರುತ್ತಿದ್ದು, ಈಗ ಸಂಪೂರ್ಣ ಗುಣಮುಖ ಆಗಿದ್ದೇನೆ ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನಷ್ಟು ಸುದ್ದಿಗಳು…
ಹುಡುಗಿಯರಿಗೆ ಉಚಿತ ಬ್ಯೂಟಿ ಪಾರ್ಲರ್, ಹಿರಿಯರಿಗೆ ತಂಬಾಕು, ಬೀಡಿ ಫ್ರೀ: ಗ್ರಾಪಂ ಅಭ್ಯರ್ಥಿಯ ಪ್ರಣಾಳಿಕೆ!
ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು !
ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಖಾಸಗಿ ಅಂಗಕ್ಕೆ ರಾಡ್ ನುಗ್ಗಿಸಿದ ದುಷ್ಟರು: ಮಹಿಳೆಯ ಸ್ಥಿತಿ ಚಿಂತಾಜನಕ
ನಾನು ಕಾಶ್ಮೀರ್ ಪಂಡಿತ್, ನನ್ನ ಕುಟುಂಬ ಕಾಶ್ಮೀರ್ ಪಂಡಿತ್ | ರಾಹುಲ್ ಗಾಂಧಿ
ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?
ಮೊದಲು ಕಾಂಗ್ರೆಸ್ ನ್ನು ತೊಡೆದು ಹಾಕಬೇಕು | ನಟ ಅಹಿಂಸಾ ಚೇತನ್
ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್