ಮತ್ತೆ ಅಧಿಕಾರದತ್ತ ಬಿಎಸ್‌ಪಿ: ಬಿಎಸ್‌ಪಿ ವರಿಷ್ಠೆ ಮಾಯಾವತಿ ವಿಶ್ವಾಸ - Mahanayaka
10:27 PM Saturday 9 - November 2024

ಮತ್ತೆ ಅಧಿಕಾರದತ್ತ ಬಿಎಸ್‌ಪಿ: ಬಿಎಸ್‌ಪಿ ವರಿಷ್ಠೆ ಮಾಯಾವತಿ ವಿಶ್ವಾಸ

mayavathi
04/03/2022

ವಾರಣಾಸಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರನ್ನು ಪ್ರತಿ ಹಂತದಲ್ಲೂ ಕಡೆಗಣಿಸಿದ್ದಾರೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.

ಬಿಎಸ್‌ಪಿ ಚುನವಣಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮತ್ತೆ ಅವರ ಮಠಕ್ಕೆ ಕಳುಹಿಸುವ ಸಮಯ ಬಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಕುಚಿತ ಮತ್ತು ಜಾತಿವಾದಿ ಮನಸ್ಥಿತಿಯಿಂದ ಆಡಳಿತ ಮಾಡಿದ್ದಾರೆ, ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರನ್ನು ಪ್ರತಿ ಹಂತದಲ್ಲೂ ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವ ಮಾಯಾವತಿ, ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಎಕ್ಸಿಟ್ ಪೋಲ್ಸ್ ಸಮೀಕ್ಷೆಯಲ್ಲಿ ಬಿಜೆಪಿ ಪರ ವರದಿ ನೀಡಿರುವುದಕ್ಕೆ ಮಾಧ್ಯಮಗಳ ವಿರುದ್ಧ ಮಾಯಾವತಿ ಕಿಡಿಕಾರಿದರು. ಅಲ್ಲದೆ, ಈ ಜನಾಭಿಪ್ರಾಯ ಮತ್ತು ಅದರ ಉತ್ಸಾಹವನ್ನು ನೋಡಿದರೆ, ನೀವು ಬಿಎಸ್‌ಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ನಿಮ್ಮ ‘ಬೆಹೆನ್‌ಜಿ’ಯನ್ನು ಐದನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ಹಾಗೂ ಯೋಗಿಯನ್ನು ವಾಪಸ್ ಅವರ ಮಠಕ್ಕೆ, ಕಳುಹಿಸಲು ನೀವು ಸಿದ್ಧರಾಗಿರುವಿರಿ ಎಂದು ನಾನು ಹೇಳಬಲ್ಲೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ಸರ್ಕಾರವು ಮುಸ್ಲಿಮರ ಅಭಿವೃದ್ಧಿ ಮತ್ತು ಭದ್ರತೆಯ ಬಗ್ಗೆ ಯಾವುದೇ ಗಮನವನ್ನು ನೀಡಿಲ್ಲ, ಅವರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಜೀವನ ಹಾಳು ಮಾಡಿದೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂ. ಅನುದಾನ ಘೋಷಣೆ

ಆಯತಪ್ಪಿ ಐದನೆ ಮಹಡಿಯಿಂದ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಗಂಭೀರ

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬೈಕ್‌ಗೆ ಟಿಪ್ಪರ್ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ