ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ: 17 ಉಕ್ರೇನ್ ನಾಗರಿಕರ ಹತ್ಯೆ - Mahanayaka
1:08 PM Thursday 12 - December 2024

ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ: 17 ಉಕ್ರೇನ್ ನಾಗರಿಕರ ಹತ್ಯೆ

kshipani
19/04/2022

ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದ್ದು,  ಡಾನ್‌ಬಾಸ್ ಪ್ರದೇಶದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಡಾನ್‌ಬಾಸ್, ಲುಹಾನ್ಸ್ಕ್ ಮತ್ತು ಖಾರ್ಕಿವ್ ನಗರಗಳಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ.  ಪೂರ್ವ ಡಾನ್ಬಾಸ್ ಪ್ರದೇಶದ ರಷ್ಯಾದ ಆಕ್ರಮಣವನ್ನು ಅಧ್ಯಕ್ಷ ವೊಲೊಡಿಮಿರ್ ಸೆಲೆನ್ಸ್ಕಿ ದೃಢಪಡಿಸಿದ್ದಾರೆ.

ಲೆವಿಸ್ ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಡಾನ್‌ಬಾಸ್ ಪ್ರದೇಶದಲ್ಲಿ ನಾಲ್ವರು ಮತ್ತು ಈಶಾನ್ಯ ಖಾರ್ಕಿವ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.  ಪ್ರಮುಖ ನಗರವಾದ  ಮಾರಿಯೋ ಪಾಲ್‌ ನಲ್ಲಿ ರಷ್ಯಾ ಕಠಿಣ ಹೋರಾಟವನ್ನು ಮುಂದುವರೆಸಿದೆ. ಇದರ ಮಧ್ಯೆ, ಉಕ್ರೇನ್ ನೆರವಿನೊಂದಿಗೆ ಅಮೆರಿಕದ ಯುದ್ಧ ವಿಮಾನಗಳು ಗಡಿಯನ್ನು ತಲುಪಿವೆ ಎಂದು ವರದಿಯಾಗಿದೆ.  ಆದರೆ ಇದನ್ನು ಎರಡೂ ದೇಶಗಳು ದೃಢಪಡಿಸಿಲ್ಲ.

ಮಾರಿಯುಪೋಲ್ ಮತ್ತು ಕ್ರೆಮ್ಲಿನ್ ನಗರಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ ಎಂದು ರಷ್ಯಾ ಹೇಳಿಕೊಂಡಿದೆ.  ನಿನ್ನೆ ಪ್ರಮುಖ ನಗರಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.  ಒಂದು ವೇಳೆ ಶರಣಾಗದಿದ್ದರೆ ಉಕ್ರೇನ್‌ನ ಉಳಿದ ಸೇನೆಯೂ ಪ್ರಾಣಾಪಾಯ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಕಠಿಣ ಎಚ್ಚರಿಕೆ ನೀಡಿದೆ.

ಯುಕ್ರೇನ್‌ನಲ್ಲಿ 4.9 ಮಿಲಿಯನ್ ಜನರು ಯುದ್ಧದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.  ಆದರೆ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಹೋದವರು ದೇಶಕ್ಕೆ ಮರಳಲು ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಮರಾವತಿಯಲ್ಲಿ ಜನಾಂಗೀಯ ಗಲಭೆ, ನಿಷೇಧಾಜ್ಞೆ ಹೇರಿಕೆ:  23 ಜನ ಬಂಧನ

ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಐಎಎಸ್ ಅಧಿಕಾರಿಯ ಕಾರು ಪಲ್ಟಿ

ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ ನಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ!

ಪತಿ ಅಪಘಾತದಲ್ಲಿ ಸಾವು: ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

ಮಠಗಳಿಂದ ಕಮಿಷನ್ ವಸೂಲಿ: ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

 

ಇತ್ತೀಚಿನ ಸುದ್ದಿ