ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಮಂತ್ರವಾದಿಯ ಬಂಧನ
ಚಾಮರಾಜನಗರ: ಆರೋಗ್ಯದಲ್ಲಿ ಸಮಸ್ಯೆಯಿದೆ ಎಂದು ತನ್ನ ಅಳಲು ತೋಡಿಕೊಂಡ ಮಹಿಳೆಗೆ ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಮಂತ್ರವಾದಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದ ಮಂತ್ರವಾದಿ ಮಹಾದೇವಸ್ವಾಮಿಯಿಂದ ಭವ್ಯ ಮೋಸ ಹೋಗಿದ್ದಾಳೆ. ಪ್ರಸ್ತುತ ಮಹಾದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ, 2.5 ಲಕ್ಷ ರೂ. ಹಣ ಮಾಯ ಮಾಡಿದ್ದೇನೆ ಎಂದು ಪೊಲೀಸರಿಗೆ ಹೇಳುತ್ತಿದ್ದಾನೆ.
ಭವ್ಯಾ ಅವರಿಗೆ ಇತ್ತೀಚಿಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಪರಿಣಾಮ ಮಂತ್ರವಾದಿ ಮಹಾದೇವಸ್ವಾಮಿ ಬಳಿ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಮಹಾದೇವಸ್ವಾಮಿ ಮಾಟ-ಮಂತ್ರದ ಕಥೆ ಕಟ್ಟಿ ಪೂಜೆ ಮಾಡಿದರೆ ಸರಿ ಹೋಗಲಿದೆ ಎಂದು ನಂಬಿಸಿದ್ದಾನೆ. ಅದರಂತೆ ಕಳೆದ ಆಗಸ್ಟ್ 9 ರ ರಾತ್ರಿ ಮನೆಗೆ ಬಂದು ಕುಡಿಕೆಯೊಂದನ್ನು ಇಟ್ಟು ಒಡವೆ, ನಗದು ಇದರಲ್ಲಿ ಹಾಕಿ ಪೂಜೆ ನಂತರ ಕೊಡುತ್ತೇನೆ ಎಂದಿದ್ದಾನೆ. ಈತನನ್ನು ನಂಬಿದ ಭವ್ಯ ತನ್ನ ಬಳಿ ಇದ್ದ ಸರ, ಓಲೆ, ಹಣ ಎಲ್ಲವನ್ನೂ ಕುಡಿಕೆಯೊಳಗೆ ಹಾಕಿದ್ದಾಳೆ.
ಬಳಿಕ ಮಹಾದೇವಸ್ವಾಮಿ, ಭವ್ಯಗೆ ಕಪ್ಪು ಬಣ್ಣದ ಚುಕ್ಕೆಯನ್ನು ಹಣೆಗೆ ಇಟ್ಟಿದ್ದಾನೆ. ನಂತರ ಆಕೆ ಮೂರ್ಛೆ ಹೋಗಿದ್ದಾಳೆ. ತಕ್ಷಣ ಅಲ್ಲಿಂದ ಮಹಾದೇವಸ್ವಾಮಿ ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಕಳೆದ ಫೆ.1 ರಂದು ದೂರು ನೀಡಿದ್ದಾಳೆ. ಘಟನೆ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿಯ ಬಂಧನ
ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ 7 ಮಂದಿಯ ಸೆರೆ
ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ನಲ್ಲೇ ತಡೆದ ಪ್ರಾಂಶುಪಾಲರು
ಹುಲ್ಲು ತರಲು ಹೋಗಿದ್ದ ವೇಳೆ ಕಾಡಾನೆ ದಾಳಿ: ವ್ಯಕ್ತಿಯ ದಾರುಣ ಸಾವು
3 ವರ್ಷದ ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ: ಸಿಸಿ ಕ್ಯಾಮರದಲ್ಲಿ ಭಯಾನಕ ದೃಶ್ಯ ಸೆರೆ