ಮತ್ತೆ ಮನೆ ಬಿಟ್ಟು ಹೋಗುತ್ತಾನೆ ಭೀಮನ ಬಾಲಣ್ಣ | ಪಾಠ ಹೇಳಿದ ಭೀಮನಿಗೆ ಮೊದಲ ಗುರುದಕ್ಷಿಣೆ | ಇಂದಿನ ಸಂಚಿಕೆಯಲ್ಲಿ ಏನೇನಿದೆ?
ಮಹಾಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ದಿನದಿಂದ ದಿನಕ್ಕೆ ಕುತೂಹಲವನ್ನು ಮೂಡಿಸುತ್ತಲೇ ಹೋಗುತ್ತಿದೆ. ಭೀಮಾಬಾಯಿಯ ಅನಾರೋಗ್ಯ ರಾಮ್ ಜಿ ಸಕ್ಪಾಲ್ ಅವರ ಕುಟುಂಬದಲ್ಲಿ ನೆಲೆಸಿದ್ದ ಸಂತಸವನ್ನು ಕಿತ್ತುಕೊಂಡಿದೆ. ರಾಮ್ ಜಿ ಸಕ್ಪಾಲ್ ಹಾಗೂ ಅವರ ಇಡೀ ಕುಟುಂಬ ಭೀಮಾಬಾಯಿಯ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದ ಸಂದರ್ಭದಲ್ಲಿ ಬಾಲ ಮನೆ ಬಿಟ್ಟು ಹೋಗಿದ್ದಾನೆ.
ಬಾಲ ಮನೆ ಬಿಟ್ಟು ಹೋಗಿರುವುದಕ್ಕೆ ಭೀಮ ಮತ್ತು ಆನಂದ ತೀವ್ರ ದುಃಖದಲ್ಲಿದ್ದಾರೆ. ಆದರೆ, ಅವನು ಮತ್ತೆ ಬರುತ್ತಾನೆ ಎನ್ನುವ ನಂಬಿಕೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಗೆ ಭೀಮ ಮತ್ತು ಆನಂದ ಬರುತ್ತಿರಬೇಕಾದರೆ, ಅಂಬೇಡ್ಕರ್ ಗುರುಗಳು “ ಬಾಲ ಎಲ್ಲಿ? ಅವನ್ಯಾಕೆ ಶಾಲೆಗೆ ಬಂದಿಲ್ಲ, ಹುಷಾರಾಗಿದ್ದಾನೆ ತಾನೆ?” ಎಂದು ಪ್ರಶ್ನಿಸುತ್ತಾರೆ. ಆಗ ಬಾಲ ಮನೆ ಬಿಟ್ಟು ಹೋಗಿರುವ ವಿಚಾರವನ್ನು ಆನಂದ ಹೇಳುತ್ತಾನೆ. ಈ ಸಂದರ್ಭ ಪಕ್ಕದಲ್ಲಿದ್ದ ಮೇಲ್ಜಾತಿ ಎಂದೆನಿಸಿಕೊಂಡವರ ಮಕ್ಕಳು ಭೀಮ ಮತ್ತು ಆನಂದನಿಗೆ ಚುಚ್ಚು ಮಾತನಾಡುತ್ತಾರೆ. ಅವನು ಇನ್ನು ಬರುವುದಿಲ್ಲ, ಅವನು ಊರು ಬಿಟ್ಟಿರುವ ವಿಚಾರ ಇಡೀ ಊರಿಗೇ ಗೊತ್ತಾಗಿದೆ. ನಿಮಗೆ ಇನ್ನೂ ಗೊತ್ತಾಗಿಲ್ವಾ ಅಂಬೇಡ್ಕರ್ ಗುರುಗಳೇ ಎಂದು ಪ್ರಶ್ನಿಸುತ್ತಾರೆ.

ಇದಕ್ಕೆಲ್ಲ ಪ್ರತಿಕ್ರಿಯಿಸದ ಅಂಬೇಡ್ಕರ್ ಗುರುಗಳು, ಭೀಮ, ಬಾಲ ಯಾಕೆ ಮನೆ ಬಿಟ್ಟು ಹೋದ ಎಂದು ಪ್ರಶ್ನಿಸುತ್ತಾರೆ. “ದುಡ್ಡು ಸಂಪಾದನೆ ಮಾಡಿ ನನ್ನನ್ನು ಓದಿಸೋಕೆ, ಅಮ್ಮನಿಗೆ ಚಿಕಿತ್ಸೆ ಕೊಡಿಸೋಕೆ, ತಂಗಿಯರ ಮದುವೆ ಮಾಡೋಕೆ ಎಂದು ಭೀಮ ಉತ್ತರಿಸುತ್ತಾನೆ. ಭೀಮನ ಮಾತಿಗೆ ಪ್ರತಿಕ್ರಿಯಿಸಿದ ಅಂಬೇಡ್ಕರ್ ಗುರುಗಳು, “ನೀನೇನು ಚಿಂತೆ ಮಾಡಬೇಡ, ನಿನ್ನ ಬಾಲಣ್ಣ ಖಂಡಿತಾ ಬಂದೇ ಬರುತ್ತಾನೆ ಎಂದು ಹೇಳುತ್ತಾರೆ. ಈ ವೇಳೆ ನಿಂದಕರ ಜಾತಿಯವರ ಮಕ್ಕಳು, ಗುರುಗಳೇ ಅವನು ಬರಲ್ಲ ಬಿಡಿ, ಇವರ ಜಾತಿ ಜನರು ನಮ್ಮನೆಗಿಂತ ಸ್ವಲ್ಪ ದೂರದಲ್ಲೇ ಇದ್ದಾರೆ, ಅಲ್ಲಿಂದನೂ ಇಬ್ಬರು ಓಡಿ ಹೋಗಿದ್ದರು. ಅವರು ಮತ್ತೆ ವಾಪಸ್ ಬಂದಿಲ್ಲ. ಕುಡ್ಕೊಂಡು ಅಲ್ಲೇ ಎಲ್ಲೋ ಬಿದ್ದು ಸತ್ತೋದ್ರು ಎಂದು ಹೇ:ಳುತ್ತಾರೆ. ಈ ವೇಳೆ ಭೀಮ, ಆದ್ರೆ ನಮ್ಮ ಬಾಲಣ್ಣ ಖಂಡಿತಾ ವಾಪಸ್ ಬರುತ್ತಾನೆ, ಯಾಕಂದ್ರೆ ಯಾವತ್ತೂ ಕುಡಿಯಲ್ಲ ಅಂತ ಅವನು ಅಪ್ಪನ ಮೇಲೆ ಆಣೆ ಮಾಡಿದ್ದಾನೆ ಎಂದು ಹೇಳುತ್ತಾನೆ. ಈ ವೇಳೆ ನಿಂದಕರ ಜಾತಿಯ ಮಕ್ಕಳು, ವಾಪಸ್ ಬಂದು ಏನ್ ಪ್ರಯೋಜನ? ಸ್ಕೂಲ್ ನಲ್ಲಿಯೂ ಅಪ್ರಯೋಜಕ, ಮನೆಯಲ್ಲಂತೂ ಕೇಳಂಗೇ ಇಲ್ಲ. ನಮ್ಮಪ್ಪ ಯಾವಾಗಲೂ ಹೇಳ್ತನೇ ಇರ್ತಾರೆ, ಈ ಜನರು ಸಮಾಜಕ್ಕೆ ಭಾರ ಅಂತ ಎಂದು ನಿಂದಿಸುತ್ತಾನೆ. ಈ ವೇಳೆ “ಮುಚ್ಚು ಬಾಯಿ” ಎಂದು ಅಂಬೇಡ್ಕರ್ ಗುರುಗಳು ಗದರುತ್ತಾರೆ. ಹಾಗೆಲ್ಲ ಮಾತನಾಡಬಾರದು, ಹೀಗೆಲ್ಲ ಮಾತನಾಡುವುದು ಅಪರಾಧವಾಗುತ್ತದೆ. ನಿನ್ನಪ್ಪ ಹೇಳಿರೋದು ಸರಿಯಲ್ಲ, ಬುದ್ಧಿ ಇಲ್ಲದಿರೋರು ಹಾಗೆಲ್ಲ ಮಾತನಾಡುತ್ತಾರೆ. ಇನ್ನೊಂದು ಬಾರಿ ಹೀಗೆ ಮಾತನಾಡಿದರೆ, ಇಲ್ಲೇ ನಿನಗೆ ಶಿಕ್ಷೆ ಕೊಡುತ್ತೇನೆ ಎಂದು ಎಚ್ಚರಿಕೆ ನೀಡುತ್ತಾರೆ. ಆ ವೇಳೆ ನಿಂದಕರ ಜಾತಿಯ ಇನ್ನೊಬ್ಬ ಹುಡುಗ, ಬಯ್ಯೋದ್ರಿಂದ ಸತ್ಯ ಸುಳ್ಳಾಗುವುದಿಲ್ಲ ಗುರುಗಳೇ ಎಂದು ಹೇಳುತ್ತಾನೆ…

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಇಂದಿನ ಸಂಚಿಕೆಯಲ್ಲಿ ಅಂಬೇಡ್ಕರ್ ಅವರ ಜೀವನದ ಇನ್ನೂ ಹಲವಾರು ಕುತೂಹಲಕಾರಿ ವಿಚಾರಗಳಿವೆ. ಓದು ಹೇಳಿಕೊಟ್ಟ ಭೀಮನಿಗೆ ಗುರುಕಾಣಿಕೆಯಾಗಿ ಹುಡುಗಿಯೊಬ್ಬಳು ಪಾಯಸವನ್ನು ನೀಡುತ್ತಾಳೆ. ಅಲ್ಲದೇ ತನಗೆ ಓದಲು ಸಹಾಯ ಮಾಡುವಂತೆ ಭೀಮನ ಬಳಿಯಲ್ಲಿ ಬೇಡುತ್ತಾಳೆ. ಹೀಗೆ ಹತ್ತು ಹಲವಾರು ಸಂಗತಿಗಳನ್ನು ಇಂದಿನ ಸಂಚಿಕೆಯಲ್ಲಿ ನೀವು ನೋಡಬಹುದಾಗಿದೆ.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ