ಮತ್ತೊಂದು ಪಟಾಕಿ ದುರಂತ: 5 ಮಂದಿಯ ದಾರುಣ ಸಾವು - Mahanayaka
3:14 AM Wednesday 5 - February 2025

ಮತ್ತೊಂದು ಪಟಾಕಿ ದುರಂತ: 5 ಮಂದಿಯ ದಾರುಣ ಸಾವು

tamilnadu
27/10/2021

ಚೆನ್ನೈ:  ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು,  ಪಟಾಕಿ ಮಳಿಗೆಗೆ ಬೆಂಕಿ ಬಿದ್ದು 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಹಲವರು ಗಾಯಗೊಂಡಿದ್ದಾರೆ.

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂಪಟ್ಟಣದ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ., ಹಲವರಿಗೆ ಗಾಯ ಕೂಡ ಆಗಿದೆ. ಪಟಾಕಿ ಸ್ಫೋಟದಿಂದ ಸಮೀಪದ ಕಟ್ಟಡದವರು ಕೂಡ ಆತಂಕಕ್ಕೀಡಾಗಿದ್ದಾರೆ.

ಘಟನೆ ಹಿನ್ನೆಲೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಂಭೀರ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಇನ್ನೂ ಘಟನೆ ನಡೆದ ತಕ್ಷಣವೇ ಈ ಸಂಬಂಧ ಮಾಹಿತಿ ಪಡೆದ ತಮಿಳುನಾಡು ಸಿಎಂ  ಎಂ.ಕೆ.ಸ್ಟ್ಯಾಲಿನ್ ಮೃತರ ಕುಟುಂಬಗಳಿಗೆ  ಪರಿಹಾರ ಘೋಷಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

 

ಇತ್ತೀಚಿನ ಸುದ್ದಿ