ಮತ್ತೊಂದು ಭೀಕರ ಸರಣಿ ಅಪಘಾತ: 8 ಮಂದಿಯ ದಾರುಣ ಸಾವು
ಹುಬ್ಬಳ್ಳಿ: ಧಾರವಾಡದ ಬಾಡ ಕ್ರಾಸ್ ನಲ್ಲಿ ನಡೆದ ಅಪಘಾತ ಪ್ರಕರಣ ಮಾಸುವ ಮೊದಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಅಪಘಾತ ನಡೆದು ಹೋಗಿದ್ದು, 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇಲ್ಲಿನ ತಾರಿಹಾಳ ಬೈಪಾಸ್ ಧಾರಾವತಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದ್ದು, ಅಪಘಾತದ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ ಟೂರಿಸ್ಟ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ವೇಳೆ ಬಸ್ ನ ಹಿಂದೆ ಬರುತ್ತಿದ್ದ ಲಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಬಸ್ ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಿವಾಲ್ವಾರ್ ತೋರಿಸಿ ಬೆದರಿಸಿ ಪಿಜಿ ಮಾಲಿಕನಿಂದ ಯುವತಿಯ ಅತ್ಯಾಚಾರ!
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ: ಅಪರೂಪದ ಘಟನೆ
ಟ್ವಿಟ್ಟರ್ ನಲ್ಲಿ ಟ್ರೆಂಟ್ ಆದ ‘ರಿಜೆಕ್ಟ್ ಬ್ರಾಹ್ಮಿನ್ ಟೆಕ್ಟ್ಸ್ ಬುಕ್’: ಚಕ್ರತೀರ್ಥ ಹಳೆಯ ಪೋಸ್ಟ್ ವೈರಲ್
ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವು