ಮಾವನ ಪಿಎಫ್ ಹಣಕ್ಕಾಗಿ ಪತ್ನಿಯನ್ನು ಕೊಂದೇ ಬಿಟ್ಟ! - Mahanayaka

ಮಾವನ ಪಿಎಫ್ ಹಣಕ್ಕಾಗಿ ಪತ್ನಿಯನ್ನು ಕೊಂದೇ ಬಿಟ್ಟ!

raichuru
07/12/2021

ರಾಯಚೂರು: ಪತಿಯ ಧನದಾಹಕ್ಕೆ ಪತ್ನಿ ಬಲಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು,  ರಾಯಚೂರಿನ ಸುಲ್ತಾನ್ ಪುರದಲ್ಲಿ ಪಾಪಿ ಪತಿಯೋರ್ವ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಅಸ್ಮಾಬಾನು ಮೃತಪಟ್ಟ ಮಹಿಳೆಯಾಗಿದ್ದು, ಇವರ ಪತಿ ಅಂದ್ರೂನ್ ಖಿಲ್ಲಾ ನಗರದ ಮೊಹಮ್ಮದ್ ಫಜಲುದ್ದೀನ್ ಹತ್ಯೆ ಆರೋಪಿಯಾಗಿದ್ದಾನೆ. ಈತ ಚಹಾಪುಡಿ ವ್ಯಾಪಾರಸ್ಥನಾಗಿದ್ದ ಎನ್ನಲಾಗಿದೆ. 8 ವರ್ಷಗಳ ಹಿಂದೆ ಅಸ್ಮಾಬಾನುಳನ್ನು ಮದುವೆಯಾಗಿದ್ದ. ಇವರಿಬ್ಬರಿಗೆ  ಇಬ್ಬರು ಮಕ್ಕಳು ಕೂಡ ಇದ್ದಾರೆ.

ತವರಿನಿಂದ ಹಣ ತರುವಂತೆ ಫಜಲುದ್ದೀನ್ ನಿರಂತರವಾಗಿ ಪತ್ನಿಯನ್ನು ಪೀಡಿಸುತ್ತಿದ್ದ.  ಆಸ್ಮಾಳ ತಂದೆ ಹುಚ್ಚಪೀರ್ ಕೆಎಸ್ಸಾರ್ಟಿಸಿ  ಕಂಡೆಕ್ಟರ್ ಆಗಿದ್ದರು. ಅವರು ನೌಕರಿಯಿಂದ ನಿವೃತ್ತರಾಗಿದ್ದು, ಹೀಗಾಗಿ ಭವಿಷ್ಯದ ನಿಧಿ(ಪಿಎಫ್) ಅವರಿಗೆ ದೊರೆತಿದೆ. ಈ ಹಣದಲ್ಲಿ ತನಗೂ ಪಾಲು ಬೇಕು ಎಂದು ಫಜಲುದ್ದೀನ್ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ತನ್ನ ತವರು ಮನೆಯ ಬಡತನ ಅರಿತಿದ್ದ ಆಸ್ಮಾ, ತಾನು ಯಾವುದೇ ಕಾರಣಕ್ಕೂ ಆ ಹಣವನ್ನು ಕೇಳುವುದಿಲ್ಲ ಎಂದು ಹೇಳಿದಾಗ ಕೋಪಗೊಂಡ ಫಜಲುದ್ದೀನ್, ಆಕೆಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಹತ್ಯೆ ನಡೆಸಿದ್ದಾನೆ. ಬಳಿಕ ಆಕೆ ಉಸಿರುಗಟ್ಟಿ ಬಿದ್ದಿದ್ದಾಳೆ ಎಂದು ಡ್ರಾಮ ಮಾಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಅಸ್ಮಾಳ ಕುತ್ತಿಗೆ ಭಾಗದಲ್ಲಿ ಕಂಡು ಬಂದ ಗಾಯವನ್ನು ಕಂಡು ತಮ್ಮ ಶೈಲಿಯಲ್ಲಿ ಫಜಲುದ್ದೀನ್ ನನ್ನು ವಿಚಾರಿಸಿದ್ದು, ಈ ವೇಳೆ ಸತ್ಯ ಬಾಯಿ ಬಿಟ್ಟಿದ್ದಾನೆ. ಇದೀಗ ಆರೋಪಿಯ ವಿರುದ್ಧ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಫಜಲುದ್ದೀನ್ ನ ಹಣದಾಹದಿಂದಾಗಿ ಪತ್ನಿ ಸಾವನ್ನಪ್ಪಿದ್ದಾಳೆ. ಆತ ಜೈಲುಪಾಲಾಗಿದ್ದಾನೆ. ಇವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಕೃತ ಘಟನೆ: ಗರ್ಭಿಣಿ ತಂಗಿಯ ಶಿರಚ್ಛೇದಿಸಿ ಸೆಲ್ಫಿ ತೆಗೆದುಕೊಂಡ ಸಹೋದರ!

‘ಬಿಜೆಪಿಯ ಭೀಷ್ಮ ‘ ಉರಿಮಜಲು ಕೆ.ರಾಮ ಭಟ್ ಇನ್ನಿಲ್ಲ

ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ

ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಪ್ರಾಂಶುಪಾಲರಿಗೆ ಗುಂಡಿಕ್ಕಿ ಹತ್ಯೆಗೆ ಯತ್ನಿಸಿದ 15ರ ಬಾಲಕ!

ಶಾಲಾ, ಕಾಲೇಜುಗಳಲ್ಲಿ ಕೊವಿಡ್ ಹೆಚ್ಚಳ: ಶಾಲಾ ಕಾಲೇಜುಗಳು ಮತ್ತೆ ಬಂದ್ ಆಗುತ್ತಾ?

ಮಕ್ಕಳನ್ನು ಮನೆಯಲ್ಲಿಯೇ ಬಂಧಿಸಿದ ತಾಯಿ: ಮಕ್ಕಳ ಅಳು ಕೇಳಲಾರದೇ ಸ್ಥಳೀಯರಿಂದ ದೂರು

ಇತ್ತೀಚಿನ ಸುದ್ದಿ