ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ
ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರಲು ದಲಿತರು ಮತ್ತು ಬ್ರಾಹ್ಮಣರು ಒಂದಾಗ ಬೇಕು ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್ ಪಿ) ವರಿಷ್ಠೆ ಮಾಯಾವತಿ ಹೇಳಿದ್ದು, ಬಿಜೆಪಿ ಹಾಗೂ ಎಸ್ ಪಿ ಕೇವಲ ಭರವಸೆ ಅಷ್ಟೇ ನೀಡುತ್ತವೆ. ಆದರೆ ಬಿಎಸ್ ಪಿ ಭರವಸೆಗಳನ್ನು ಈಡೇರಿಸುವ ಪಕ್ಷವಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಗಳನ್ನು ಸೆಳೆಯಲು ಬಿಎಸ್ ಪಿ ಆಯೋಜಿಸಿರುವ ಪ್ರಬುದ್ಧ ವರ್ಗ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಮಾಯಾವತಿ, ಬಿಜೆಪಿ ಮತ್ತು ಎಸ್ ಪಿ ದಲಿತರು ಹಾಗೂ ಬ್ರಾಹ್ಮಣರ ಮತಗಳನ್ನು ಪಡೆಯಲು ಏನೇನೋ ಆಮಿಷಗಳನ್ನು ಒಡ್ಡುತ್ತಿವೆ. ಆದರೆ, ಅದನ್ನು ಈಡೇರಿಸಲು ಪ್ರಯತ್ನಿಸುವುದಿಲ್ಲ ಎಂದು ಅವರು ಟೀಕಿಸಿದರು.
ಬಿಜೆಪಿ ಮತ್ತು ಎಸ್ ಪಿಯಂತೆ ಕೇವಲ ಭರವಸೆ ನೀಡುವ ಪಕ್ಷ ಬಿಎಸ್ ಪಿ ಅಲ್ಲ. ನಾವು ಏನು ಆಶ್ವಾಸನೆ ನೀಡುತ್ತೇವೆಯೋ ಅದನ್ನು ಮಾಡಿ ತೋರಿಸುತ್ತೇವೆ. 2007ರಿಂದ 2012ರವರೆಗೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಆಡಳಿತದಲ್ಲಿದ್ದಾಗ ದಲಿತರು ಹಾಗೂ ಬ್ರಾಹ್ಮಣರ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು ಎಂದ ಅವರು, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಬ್ರಾಹ್ಮಣ ಹಾಗೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೆ ಆದೇಶಿಸುತ್ತೇವೆ ಎಂದು ಮಾಯಾವತಿ ಭರವಸೆ ನೀಡಿದರು. ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಬಿಎಸ್ ಪಿಯಿಂದ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಅವರು ಘೋಷಿಸಿದರು.
ಇನ್ನಷ್ಟು ಸುದ್ದಿಗಳು…
ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್
ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ!
ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!
ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು
ಪಂಜ್ ಶಿರ್ ಗಳನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಸುಳ್ಳು | ಸ್ಪಷ್ಟಪಡಿಸಿದ NRF
ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್