ಮೋದಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷ ನಮ್ಮದಲ್ಲ: ರಾಹುಲ್ ಗಾಂಧಿಗೆ ಮಾಯಾವತಿ ಖಾರ ಪ್ರತಿಕ್ರಿಯೆ - Mahanayaka

ಮೋದಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷ ನಮ್ಮದಲ್ಲ: ರಾಹುಲ್ ಗಾಂಧಿಗೆ ಮಾಯಾವತಿ ಖಾರ ಪ್ರತಿಕ್ರಿಯೆ

mayawati
10/04/2022

ಲಕ್ನೋ: ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್ ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಿಎಸ್ ಪಿಯನ್ನು ಸಂಪರ್ಕಿಸಿದ್ದೆವು, ಮುಖ್ಯಮಂತ್ರಿ ಸ್ಥಾನ ನೀಡುವುದಾಗಿಯೂ ಹೇಳಿದ್ದೆವು ಆದರೆ, ಮಾಯಾವತಿ ಸ್ಪಂದಿಸಿರಲಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಮೊದಲು ತನ್ನ ಬಗ್ಗೆ ಚಿಂತಿಸಬೇಕಿದೆ. ಇಂತಹ ಟೀಕೆಗಳು ಬಿಎಸ್ ಪಿಗೆ ಹಾನಿ ಮಾಡುವ ಪ್ರಯತ್ನಗಳಷ್ಟೆ. ಬಿಜೆಪಿ ಮತ್ತು ಆರೆಸ್ಸೆಸ್ ಭಾರತವನ್ನು ಕೇವಲ ಕಾಂಗ್ರೆಸ್ ಮುಕ್ತವನ್ನಾಗಿಸಲು ಹೊರಟಿಲ್ಲ. ವಿರೋಧ ಪಕ್ಷ ಮುಕ್ತ ಮಾಡಲು ಹೊರಟಿದೆ. ಚೀನಾದ ರಾಜಕೀಯ ವ್ಯವಸ್ಥೆಯಂತೆಯೇ ಭಾರತ ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ಕೇವಲ ಒಂದು ಪ್ರಬಲ ಪಕ್ಷದೊಂದಿಗೆ ಉಳಿಯುತ್ತದೆ ಎಂದು ಮಾಯಾವತಿ ಹೇಳಿದರು.

ರಾಹುಲ್ ಗಾಂಧಿಯಂತಹ ನಾಯಕರು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರನ್ನು ಬಲವಂತವಾಗಿ ತಬ್ಬಿಕೊಳ್ಳುವಂತಹ ಪಕ್ಷ ನಮ್ಮದಲ್ಲ, ಪ್ರಪಂಚದಾದ್ಯಂತ ಸುತ್ತಿ ಮೋಜು ಮಾಡುವ ಪಕ್ಷವೂ ನಮ್ಮದಲ್ಲ ಎಂದು ರಾಹುಲ್ ಗಾಂಧಿಗೆ ಮಾಯಾವತಿ ಖಾರವಾಗಿ ಪ್ರತಿಕ್ರಿಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರುಗಳ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ಕೇಸರಿ ಶಾಲು ಧರಿಸಿ ರಾಮನವಮಿ ಆಚರಿಸಿದ ಮುಸ್ಲಿಮರು!

ಶೂದ್ರ ಎಂಬ ಪದವನ್ನು ಶುದ್ಧ ಎಂದು ಬದಲಿಸಬೇಕು: ಹಂಸಲೇಖ

ಒಂದೇ ಚಾರ್ಜ್ ನಲ್ಲಿ 400 ಕಿ.ಮೀ. ಚಲಿಸುವ ಹೊಸ Nexon EV ಏಪ್ರಿಲ್ ನಲ್ಲಿ ಬಿಡುಗಡೆ

ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸಪಡಿಸಿಕೊಳ್ಳುತ್ತಿದೆ: ಪ್ರಕಾಶ್ ಕಾರಟ್

ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು  | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?

ಇತ್ತೀಚಿನ ಸುದ್ದಿ