ಮೈದಾನದ ಬಳಿ ನಿಂತು ಗಾಂಜಾ ಸೇದುತ್ತಿದ್ದ ವ್ಯಕ್ತಿಯ ಬಂಧನ
28/08/2022
ಕಾರ್ಕಳ: ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ಗಾಂಜಾ ಸೇದುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
ನಗರದ 36 ವರ್ಷದ ಮಹಮದ್ ರಫೀಕ್ ಬಂಧಿತ ಆರೋಪಿ. ಈತ ಆ.26ರಂದು ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ಗಾಂಜಾವನ್ನು ಪೇಪರ್ ನಲ್ಲಿ ಸೇರಿಸಿ ಸಿಗರೇಟ್ ನಂತೆ ರೋಲ್ ಮಾಡಿ ಸೇದುತ್ತಿದ್ದನು.
ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆ. 27ರಂದು ಬಂದಿರುವ ವೈದ್ಯಕೀಯ ವರದಿಯಲ್ಲಿ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka