ಬಿ.ಎ.ಎಂ.ಎಸ್. ಪದವಿಯಲ್ಲಿ ಅನುತ್ತೀರ್ಣ: ನೇಣಿಗೆ ಶರಣಾದ ವಿದ್ಯಾರ್ಥಿ - Mahanayaka
9:20 PM Wednesday 5 - February 2025

ಬಿ.ಎ.ಎಂ.ಎಸ್. ಪದವಿಯಲ್ಲಿ ಅನುತ್ತೀರ್ಣ: ನೇಣಿಗೆ ಶರಣಾದ ವಿದ್ಯಾರ್ಥಿ

mbbs
16/09/2022

ಮಣಿಪಾಲ: ಬಿ.ಎ.ಎಂ.ಎಸ್. ಪದವಿಯಲ್ಲಿ ಅನುತ್ತೀರ್ಣನಾದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಡಗಬೆಟ್ಟು ಗ್ರಾಮದ ಕಬ್ಯಾಡಿಯಲ್ಲಿ ಇಂದು ಸಂಜೆ ಬೆಳಕಿಗೆ ಬಂದಿದೆ.

ಮೃತರನ್ನು ಕಬ್ಯಾಡಿ ನಿವಾಸಿ ಪೃಥ್ವಿ ಕುಲಕರ್ಣಿ(24) ಎಂದು ಗುರುತಿಸಲಾಗಿದೆ . ಈತ ಬಿ.ಎ.ಎಂ.ಎಸ್. ಪದವಿಯಲ್ಲಿ ಅನುತ್ತಿರ್ಣನಾಗಿದ್ದರಿಂದ ಸುಮಾರು ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹೊಟ್ಟೆ ನೋವಿನಿಂದ ಬಳುತ್ತಿದ್ದ ಮಹಿಳೆ ಸಾವು

death

ಗಂಗೊಳ್ಳಿ: ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಗಂಗೊಳ್ಳಿ ಗ್ರಾಮದ ಗುಡ್ಡೆಹೌಸ್‌ ಎಂಬಲ್ಲಿ ಇಂದು ನಡೆದಿದೆ.

ಗಂಗೊಳ್ಳಿ ಗ್ರಾಮದ ಗುಡ್ಡೆಹೌಸ್‌ ನಿವಾಸಿ 27ವರ್ಷದ ಅಲ್ಫಿನಾ ಇರ್ಷಾದ್ ಶೇಖ್ ಮೃತದುರ್ದೈವಿ. ಇವರಿಗೆ ಸೆ.14ರಂದು ರಾತ್ರಿ ವಿಪರೀತ ಹೊಟ್ಟೆ ನೋವು, ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದ್ದು, ಚಿಕಿತ್ಸೆ ಕುಂದಾಪುರದ ನ್ಯೂ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿ ಚಿಕಿತ್ಸೆ ಪಡೆದ ಬಳಿಕ‌ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಲ್ಫಿನಾ ಇರ್ಷಾದ್ ಶೇಖ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ