10:52 AM Wednesday 12 - March 2025

ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?

mcdonalds
09/06/2022

ಅಹಮದಾಬಾದ್: ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸರಬರಾಜು ಸಂಸ್ಥೆ ಮೆಕ್ ಡೊನಾಲ್ಡ್ಸ್ ಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮೆಕ್ ಡೊನಾಲ್ಡ್ ಔಟ್ ಲೆಟ್ ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ದಂಡವನ್ನು ಪಾವತಿಸಿದ ನಂತರ ಅಹಮದಾಬಾದ್ ನ ಮೆಕ್ ಡೊನಾಲ್ಡ್ಸ್ ಸೋಲಾ ಏರಿಯಾದ ಔಟ್ ಲೆಟ್ ಅನ್ನು ಸ್ವಚ್ಛಗೊಳಿಸಲು ಎರಡು ದಿನ ಕಾಲಾವಕಾಶ ನೀಡಲಾಗುತ್ತದೆ. ಸಂಪೂರ್ಣ ತಪಾಸಣೆಯ ನಂತರ ಮುನಿಸಿಪಲ್ ಕಾರ್ಪೊರೇಷನ್ ಗೆ ಸರಿ ಎನಿಸಿದರೆ ಮಾತ್ರ ರೆಸ್ಟೋರೆಂಟ್ ಮರು ಆರಂಭಿಸಲು ಅನುಮತಿಸಲಾಗುತ್ತದೆ ಎಂದು ತಿಳಿಸಿದೆ.

ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೆಲವೇ ದಿನಗಳ ಬಳಿಕ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಅವರು ಮೂರು ತಿಂಗಳ ಕಾಲ ರೆಸ್ಟೋರೆಂಟ್ಗಳಲ್ಲಿ ಹಠಾತ್ ತಪಾಸಣೆ ನಡೆಸುವುದಾಗಿಯೂ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!

ಮಹಿಳೆಯನ್ನು ಬಲಿ ಪಡೆದ ಆನ್‌ ಲೈನ್ ರಮ್ಮಿ ಆಟ:  ರಮ್ಮಿ ವ್ಯಸನಿಗಳೇ ಎಚ್ಚರ!

ರಾಜ್ಯದ ಎಲ್ಲಾ ಆರೆಸ್ಸೆಸ್ ಕಚೇರಿಗಳಿಗೆ ಪೊಲೀಸ್ ರಕ್ಷಣೆ: ಆರಗ ಜ್ಞಾನೇಂದ್ರ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್

ಇತ್ತೀಚಿನ ಸುದ್ದಿ

Exit mobile version