ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು - Mahanayaka
1:03 AM Wednesday 11 - December 2024

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

udupi news
22/11/2021

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ  ಯುವಕನೋರ್ವ ಮದುವೆಯಾಗುವಂತೆ ಕೇಳಿದಾಗ ಜಾತಕ ಸರಿ ಹೊಂದುವುದಿಲ್ಲ ಎಂದು ಹೇಳಿ ಮದುವೆ ನಿರಾಕರಿಸಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ  ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

ಮಣಿಪಾಲ ನಿವಾಸಿ ಪ್ರಶಾಂತ್ ಮೊದಲಿಯಾರ್ ಎಂಬಾತನ ವಿರುದ್ಧ ತಮಿಳುನಾಡು ಮೂಲದ 25 ವರ್ಷ ವಯಸ್ಸಿನ ಯುವತಿ ದೂರು ದಾಖಲಿಸಿದ್ದು,  2018ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಆರೋಪಿಯ ಪರಿಚಯವಾಗಿತ್ತು. ಆ ಬಳಿಕ ಇಬ್ಬರೂ ಪ್ರೀತಿಸುತ್ತಿದ್ದು, ಜೂನ್ 26, 2021ರಂದು ಪ್ರಶಾಂತ್ ತಾನು ಕೆಲಸ  ಮಾಡುತ್ತಿದ್ದ ಮಣಿಪಾಲಕ್ಕೆ ಯುವತಿಯನ್ನು ಆಹ್ವಾನಿಸಿ ಮದುವೆಯ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೈಹಿಕ ಸಂಬಂಧ ಬೆಳೆಸಿದ ಬಳಿಕ ವರಸೆ ಬದಲಿಸಿದ್ದ ಪ್ರಶಾಂತ್, ನಮ್ಮಿಬ್ಬರ ಜಾತಕ ಸರಿ ಹೊಂದುವುದಿಲ್ಲ ಎಂಬ ಕಾರಣವನ್ನು ನೀಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಸಂತ್ರಸ್ತ ಯುವತಿ ಮಹಿಳಾ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ಬಾಲಕಿಯನ್ನು ಕೊಂದು ಚರಂಡಿಗೆಸೆದ ಪಾಪಿಗಳು!

ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ | ಸ್ವಾಮೀಜಿ ಎಚ್ಚರಿಕೆ

ಬಾಕಿ ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈಯನ್ನೇ ಕತ್ತರಿಸಿದ ಪಾಪಿಗಳು!

ಗ್ರಾಹಕನನ್ನು ತಡೆದು, ‘ಪ್ಯಾಂಟ್ ಧರಿಸಿ ಬನ್ನಿ’ ಎಂದು ವಾಪಾಸ್ ಕಳುಹಿಸಿದ ಬ್ಯಾಂಕ್ ಸಿಬ್ಬಂದಿ!

50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ, 5 ಲಕ್ಷ ಪರಿಹಾರ ನೀಡುತ್ತೇವೆ | ಸಚಿವ ಡಾ.ಕೆ.ಸುಧಾಕರ್

“ಕೃಷಿ ಕಾಯ್ದೆ ರದ್ದು ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ” | ನಿಜವಾಯ್ತು ರಾಹುಲ್ ಗಾಂಧಿ ಹೇಳಿಕೆ

ಇತ್ತೀಚಿನ ಸುದ್ದಿ