ಗಾಝಾ ನೋವನ್ನು ಜಗತ್ತಿಗೆ ಪರಿಚಯಿಸಿದ ಪತ್ರಕರ್ತೆ ಮಹಾ ಹುಸೈನಿಗೆ ಅಂತರಾಷ್ಟ್ರೀಯ ಜರ್ನಲಿಸಂ ಪುರಸ್ಕಾರ

ಗಾಝಾದ ಮೇಲೆ ಇಸ್ರೇಲ್ ಬಾಂಬ್ ಸುರಿಸುತ್ತಿರುವುದರ ನಡುವೆ ಜನಸಾಮಾನ್ಯರ ಭಾವನೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟ ಪತ್ರಕರ್ತೆ ಮಹಾ ಹುಸೈನಿ ಅವರಿಗೆ ಅಂತರಾಷ್ಟ್ರೀಯ ಜರ್ನಲಿಸಂ ಪುರಸ್ಕಾರ ಲಭಿಸಿದೆ. ಮಿಡ್ಲ್ ಈಸ್ಟ್ ಐ ಅಧೀನದಲ್ಲಿ ಅವರು ಮಾಡಿರುವ ವರದಿಗಾರಿಕೆ ಮತ್ತು ಧೈರ್ಯದ ಪತ್ರಕರ್ತ ವೃತ್ತಿಗಾಗಿ ಅವರಿಗೆ ಈ ಪುರಸ್ಕಾರ ಲಭಿಸಿದೆ.
ಕಳೆದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕದಿಂದ ಹತ್ತು ಹಲವು ವರದಿಗಾರಿಕೆ ಮಾತುಕತೆ ಸಂದರ್ಶನ ಗ್ರೌಂಡ್ ರಿಪೋರ್ಟ್ ಗಳನ್ನು ಹುಸೇನಿ ಮಾಡಿದ್ದರು. ಇಸ್ರೇಲ್ ಜನಾಂಗ ನಿರ್ಮೂಲನ ಮಾಡುತ್ತಿದೆ ಎಂಬುದಕ್ಕೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಸೌತ್ ಆಫ್ರಿಕಾ ಇದೇ ವರದಿಯನ್ನು ಆಧಾರವಾಗಿ ನೀಡಿತ್ತು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಹುಸೈನಿ ವರದಿಗಾರಿಕೆ ಮಾಡಿದ್ದರು. ಅವರ ಜೀವಕ್ಕೆ ಬೆದರಿಕೆ ಹಾಕಲಾಗಿತ್ತು. ಇಸ್ರೇಲ್ ನ ಬಾಂಬನ್ನು ತಪ್ಪಿಸುವುದಕ್ಕಾಗಿ ಪದೇಪದೇ ತನ್ನ ವಾಸಸ್ಥಾನವನ್ನು ಬದಲಿಸಬೇಕಾಗಿತ್ತು. ಇಂಟರ್ನೆಟ್ ಇಲ್ಲದೆ ಮತ್ತು ವಿದ್ಯುತ್ ಇಲ್ಲದೆ ಅವರು ಕೆಲಸ ಮಾಡಬೇಕಾಗಿತ್ತು. ಇಸ್ರೇಲ್ ಸೇನೆಯು ಜರ್ನಲಿಸ್ಟ್ಗಳನ್ನೇ ಮುಖ್ಯವಾಗಿ ಟಾರ್ಗೆಟ್ ಮಾಡಿತ್ತು ಎಂದು ಹುಸೇನಿ ಹೇಳಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಜೊತೆಗಾರರನ್ನೇ ಕಳಕೊಂಡೆ, ಸುಮಾರು 150 ಮಂದಿ ಜರ್ನ ಲಿಸ್ಟ್ ಗಳು ಈ ವರದಿಗಾರಿಕೆಯ ನಡುವೆ ಸಾವನ್ನಪ್ಪಿದ್ದಾರೆ ಇಂಥ ರಿಸ್ಕ್ ನ ನಡುವೆ ನಾನು ಮಾಡಿರುವ ಕೆಲಸ ಜಗತ್ತಿನ ಕಣ್ಣು ತೆರೆಸಲು ಶಕ್ತವಾದರೆ ಅದುವೇ ದೊಡ್ಡ ಪುರಸ್ಕಾರ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth