ಮೀನುಗಾರನನ್ನು ತಲೆಕೆಳಗಾಗಿ ನೇತು ಹಾಕಿ ಹಲ್ಲೆ: ಆರು ಮಂದಿ ಆರೋಪಿಗಳು ಅರೆಸ್ಟ್
ಮಂಗಳೂರು: ಇಲ್ಲಿನ ಹಳೆ ಬಂದರಿನಲ್ಲಿ ಮೀನುಗಾರಿಕಾ ಹಡಗಿನಲ್ಲಿ ಮೀನುಗಾರನೊಬ್ಬನನ್ನು ತಲೆಕೆಳಗೆ ನೇತುಹಾಕಿ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಆರು ಮೀನುಗಾರರನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಮೀನುಗಾರನನ್ನು ಪ್ರಕಾಶಂ ಜಿಲ್ಲೆಯ ವೈಲಾ ಶೀನು(32) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನಲ್ಲೂರಿನ ಕೊಂಡೂರು ಪೋಲಯ್ಯ(23), ಅವುಲ್ ರಾಜ್ ಕುಮಾರ್(26), ಕರಪಿಂಗರ ರವಿ(27), ಪ್ರಳಯಕಾವೇರಿ ಗೋವಿಂದಯ್ಯ(47), ಪ್ರಕಾಶಂ ಜಿಲ್ಲೆಯ ಕಟಿಂಗರಿ ಮನೋಹರ್(21), ವೋಟು ಕೋರಿ ಜಾಲಯ್ಯ(30) ಎಂದು ಗುರುತಿಸಲಾಗಿದೆ.
ಡಿಸೆಂಬರ್ 16 ರಂದು ಜಾನ್ ಶೈಲೇಶ್ -2 ಎಂಬ ಹಡಗಿನಲ್ಲಿ ಮೀನುಗಾರಿಕೆಗೆ ತೆರಳಲು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಗಳೊಂದಿಗೆ ಸೇರಿಕೊಳ್ಳಬೇಕಿತ್ತು. ಆದರೆ ಹಿಂದಿನ ರಾತ್ರಿ ನಡೆದ ಔತಣಕೂಟದ ನಂತರ ಎರಡು ಮೊಬೈಲ್ ಫೋನ್‌ಗಳು ಕಾಣೆಯಾಗಿವೆ. ಈ ವೇಳೆ ವೈಲಾ ಶೀನು ಮೇಲೆ ಅನುಮಾನಗೊಂಡ ಮೀನುಗಾರರು, ಆತನೇ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ದೋಣಿಗೆ ಕರೆದೊಯ್ದು ಥಳಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ದಕ್ಷಿಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲೋಕೇಶ್ ಎಸಿ ಅವರ ಮೊಬೈಲ್ ಗೆ ಮೀನುಗಾರನನ್ನು ಥಳಿಸಿದ ವಿಡಿಯೋ ಬಂದಿತ್ತು. ಈ ಘಟನೆಯಿಂದ ಮನನೊಂದ ಸಂತ್ರಸ್ತ ವ್ಯಕ್ತಿ ಕಾರವಾರಕ್ಕೆ ತೆರಳಿದ್ದರು. ನಂತರ ಅವರು ಮಂಗಳೂರಿಗೆ ಮರಳಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
22 ವರ್ಷವಾಗದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಬಾರದು | ಶೋಭಾ ಕರಂದ್ಲಾಜೆ
ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!
ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ!
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ “ಕರುನಾಡ ರತ್ನ” ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ
ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ
ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!