ಮೀನು ಹಿಡಿಯಲು ಹೋದ ಸಿವಿಲ್ ಇಂಜಿನಿಯರ್ ಕೆರೆಯಲ್ಲಿ ಮುಳುಗಿ ಸಾವು
03/05/2021
ಚಿಕ್ಕಬಳ್ಳಾಪುರ: ಮೀನು ಹಿಡಿಯಲು ಹೋದ ಯುವಕನೋರ್ವ ಕೆರೆಯಲ್ಲಿ ಮುಳು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಅರಸೀಕೆರೆಯಲ್ಲಿ ನಡೆದಿದೆ.
ಗದಗ ಮೂಲದ ಮೊಹಮ್ಮದ್ ಹುಸೇನ್ ಮೃತ ಯುವಕನಾಗಿದ್ದು, ಲಾಕ್ ಡೌನ್ ರಜೆಯಲ್ಲಿ ಸ್ನೇಹಿತರ ಜೊತೆ ಮೀನು ಹಿಡಿಯಲು ಅರಸಿಕರೆಗೆ ತೆರಳಿದ್ದರು. ಈ ವೇಳೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹುಸೇನ್ ಜೊತೆಗಿದ್ದ ಇತರ ಸ್ನೇಹಿತರು ರಕ್ಷಣ ಮಾಡಲು ಯತ್ನಿಸಿದ್ದಾರೆ. ಆದರೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಯುವಕ ಸಿವಿಲ್ ಇಂಜಿನಿಯರ್ ಆಗಿದ್ದ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.