ಹವ್ಯಾಸಿ ಮೀನುಗಾರನ ಗಾಳಕ್ಕೆ ಬಿತ್ತು ಎರಡು ಬೃಹತ್ ಮೀನುಗಳು!
ಉಡುಪಿ: ಹವ್ಯಾಸಿ ಮೀನುಗಾರರೊಬ್ಬರ ಗಾಳಕ್ಕೆ ಎರಡು ಬೃಹತ್ ಮೀನುಗಳು ಬಿದ್ದಿದ್ದು, ಒಂದು ಮೀನು ಬರೋಬ್ಬರಿ 22 ಕೆ.ಜಿ. ಇದ್ದರೆ ಮತ್ತೊಂದು ಮೀನು 12 ಕೆ.ಜಿ. ತೂಕದ್ದಾಗಿದೆ.
ಉದ್ಯಾವರದ ಹವ್ಯಾಸಿ ಮೀನುಗಾರರಾಗಿರುವ ನಾಗೇಶ್ ಉದ್ಯಾವರ ಅವರು, ಕಟಪಾಡಿ ಸಮೀಪದ ಪುಟ್ಟದ್ವೀಪ ಕಟಪಾಡಿ ಪಾರ್ ಬಳಿ ಅರಬಿ ಸಮುದ್ರಕ್ಕೆ ಗಾಳ ಹಾಕಿ ಮೀನು ಹಿಡಿದಿದ್ದು, ಈ ವೇಳೆ ಎರಡು ಬೃಹತ್ ಮೀನುಗಳು ಸೆರೆ ಸಿಕ್ಕಿವೆ.
22 ಕೆ.ಜಿ.ಯ ಮುರು ಎಂಬ ಹೆಸರಿನ ಮೀನು ಹಾಗೂ 12 ಕೆ.ಜಿ. ಕೊಕ್ಕರ್ ಎಂಬ ಹೆಸರಿನ ಮೀನು ಗಾಳಕ್ಕೆ ಸಿಕ್ಕಿದೆ. ಈ ಮೀನುಗಳನ್ನು ಕಂಡು ಸ್ವತಃ ನಾಗೇಶ್ ಅವರು ಶಾಕ್ ಆಗಿದ್ದಾರೆ. ಜೊತೆಗೆ ಈ ಮೀನುಗಳನ್ನು ಸಾಕಷ್ಟು ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka