ಸುಂದರವಾಗಿ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ - Mahanayaka

ಸುಂದರವಾಗಿ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ

suresh vaghela
27/05/2021

ಅಹ್ಮದಾಬಾದ್: ಸುಂದರವಾದ ಮೀಸೆಯಟ್ಟು, ಮೀಸೆ ತಿರುವಿದ ದಲಿತ ಯುವಕನಿಗೆ 11 ಮಂದಿ ದುಷ್ಟರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಹ್ಮದಾಬಾದ್ ನ ವಿರಮ್ ಗಾಮ್ ತಾಲೂಕಿನಲ್ಲಿ ನಡೆದಿದೆ.

22 ವರ್ಷ ವಯಸ್ಸಿನ ಸುರೇಶ್ ವಘೇಲಾ ಹಲ್ಲೆಗೊಳಗಾದ ಯುವಕನಾಗಿದ್ದು, ಸುಂದರವಾಗಿ ಮೀಸೆ ಬೆಳೆಸಿ ಮೀಸೆ ತಿರುವಿದ್ದಕ್ಕೆ, ಮೇಲ್ಜಾತಿ ಎಂದೆನಿಸಿಕೊಂಡಿರುವ ಕೆಲವು ದುಷ್ಟರು ಸುರೇಶ್ ಮೇಲೆ 11 ಮಂದಿಯ ತಂಡ ಕಟ್ಟಿಕೊಂಡು ಬಂದು ದಾಳಿ  ನಡೆಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಯುವಕ ಸುರೇಶ್ ಮೀಸೆ ಇಟ್ಟು, ಮೇಲ್ಜಾತಿ ಎಂದೆನಿಸಿಕೊಂಡವರಿಗಿಂತಲೂ ಸುಂದರನಾಗಿ ಕಾಣಿಸಿಕೊಂಡಿರುವುದರಿಂದ ಹೊಟ್ಟೆ ಉರಿದುಕೊಂಡು ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ರಾತ್ರೋ ರಾತ್ರಿ ಕಳ್ಳರಂತೆ ಮನೆಗೆ ಮುಂದೆ ಜಮಾಯಿಸಿದ ಧಮಾ ಠಾಕೋರ್ ಎಂಬ ಜಾತಿಯ ಪುಂಡರ ಪಡೆ ಕರತ್ಕಲ್ ಗ್ರಾಮದಲ್ಲಿರುವ ಸುರೇಶ್ ವಘೇಲಾ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್.ವೈಸ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ