ಹೊತ್ತಿ ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್ ನ್ನು ಹೊರ ತೆಗೆದಿದ್ದ ಬಸ್ ಚಾಲಕ, ನಿರ್ವಾಹಕನಿಗೆ ಸನ್ಮಾನ
![rishab pant](https://www.mahanayaka.in/wp-content/uploads/2022/12/rishab-pant.jpg)
ಚಂಡೀಗಡ: ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತವಾಗಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ವೇಳೆ ಅವರನ್ನು ಕಾರಿನಿಂದ ಹೊರ ತೆಗೆದು ರಕ್ಷಿಸಿದ ಬಸ್ ಚಾಲಕ ಸುಶೀಲ್ ಕುಮಾರ್ ಹಾಗೂ ನಿರ್ವಾಹಕ ಪರಮ್ ಜಿತ್ ಅವರಿಗೆ ಹರ್ಯಾಣ ಸಾರಿಗೆ ಸಂಸ್ಥೆ ಹರ್ಯಾಣ ರೋಡ್ ವೇಸ್ ಸನ್ಮಾನಿಸಿದೆ.
25 ವರ್ಷದ ರಿಷಭ್ ಪಂತ್ ಚಲಾಯಿಸುತ್ತಿದ್ದ ಕಾರು ದೆಹಲಿ—ಡೆಹ್ರಾಡೂನ್ ಹೆದ್ದಾರಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿತ್ತು. ಕಾರಿಗೆ ಸಂಪೂರ್ಣವಾಗಿ ಬೆಂಕಿ ಆವರಿಸುವುದಕ್ಕೂ ಮೊದಲೇ ಬಸ್ ಚಾಲಕ ಮತ್ತು ನಿರ್ವಾಹಕ ಕಾರಿನಿಂದ ರಿಷಭ್ ಪಂತ್ ಅವರನ್ನು ಹೊರ ತೆಗೆದಿದ್ದಾರೆ. ಇಲ್ಲವಾದರೆ ಅವರ ಪ್ರಾಣಕ್ಕೆ ಅಪಾಯವಾಗುತ್ತಿತ್ತು.
ಹರಿದ್ವಾರದಿಂದ ಪಾಣಿಪತ್ ನಡುವೆ ಸಂಚರಿಸುವ ಬಸ್ ನಲ್ಲಿ ಇವರಿಬ್ಬರು ಕಾರ್ಯನಿರ್ವಹಿಸುತ್ತಿದ್ದರು. ಮುಂಜಾನೆ 4:25ಕ್ಕೆ ಇವರ ಬಸ್ ಹರಿದ್ವಾರದಿಂದ ಪ್ರಯಾಣ ಆರಂಭಿಸಿತ್ತು. ಒಂದು ಗಂಟೆಯ ಪ್ರಯಾಣದಲ್ಲಿ ಘಟನಾ ಸ್ಥಳಕ್ಕೆ ಬಂದಿತ್ತು. ರಿಷಭ್ ಪಂತ್ ನ್ನು ಕಾರಿನಿಂದ ಹೊರ ತೆಗೆದ ಕೆಲವೇ ಕ್ಷಣಗಳಲ್ಲಿ ಕಾರು ಬೆಂಕಿಯುಂಟೆಯಾಗಿತ್ತು ಎಂದು ಇವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw