ಪ್ರವಾಹದಿಂದ ರಕ್ಷಣೆ ಪಡೆಯಲು ಮನೆಯ ಮೇಲ್ಛಾವಣಿ ಏರಿದ ಬಾಲಕಿ ಮತ್ತು ಸಾಕು ನಾಯಿ

america
31/07/2022

ADS

ಅಮೆರಿಕದ ಕೆಂಟುಕಿಯಲ್ಲಿ ಬಾಲಕಿ ಮತ್ತು ಆಕೆಯ ಸಾಕುನಾಯಿ ಪ್ರವಾಹದಿಂದ ಪಾರಾಗಲು ಯತ್ನಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ.

ಮನೆಯ ಎತ್ತರಕ್ಕೆ ನೀರು ಏರಿದಾಗ ಸುರಕ್ಷತೆಗಾಗಿ ಛಾವಣಿಯ ಮೇಲೆ 17 ವರ್ಷದ ಕ್ಲೋಯ್ ಆದಮ್ ರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ಗುರುವಾರ, ಕೆಂಟುಕಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಠಾತ್ ಪ್ರವಾಹಗಳು ಮತ್ತು ಭೂಕುಸಿತದಲ್ಲಿ  16 ಮಂದಿ ಸಾವನ್ನಪ್ಪಿದ್ದಾರೆ.

ಇಂತಹ ಪ್ರವಾಹದ ವೇಳೆ ತನ್ನನ್ನು ರಕ್ಷಿಸಿದ್ದು ಮಾತ್ರವಲ್ಲದೆ ತನ್ನ ಪ್ರೀತಿಯ ಮುದ್ದಿನ ನಾಯಿ ಸ್ಯಾಂಡಿಯನ್ನು ಕೂಡ ರಕ್ಷಣೆ ಮಾಡಲು ಈಕೆ ಮರೆಯಲಿಲ್ಲ. ಮನೆಗೆ ನೀರು ನುಗ್ಗಿದಾಗ ಆದಮ್ ತನ್ನ ನಾಯಿಯನ್ನು ತಬ್ಬಿಕೊಂಡು ಸಹಾಯ ಬರುವವರೆಗೂ ತನ್ನ ಜೊತೆಯಲ್ಲಿಯೇ ಇಡುತ್ತಾಳೆ.

ಆದಮ್‌ ನ ತಂದೆ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು  ಅದರೊಂದಿಗೆ ಸೋಶಿಯಲ್ ಮೀಡಿಯಾ ಹೀರೋ ಎಂಬ ಬಿರುದನ್ನು ಕೂಡ  ಈಕೆಗೆ ನೀಡಿದೆ.

ADS

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version