ಕೊವಿಡ್ ವಾರ್ಡ್ ಗೆ ಬಂದು ಜೋರಾಗಿ ಮಾತನಾಡಿದ | ಮೆಲ್ಲ ಮಾತನಾಡು ಎಂದಿದ್ದಕ್ಕೆ ಡಾಕ್ಟರ್ ಗೆ ಚೂರಿ ಹಾಕಿದ! - Mahanayaka
3:02 AM Friday 20 - September 2024

ಕೊವಿಡ್ ವಾರ್ಡ್ ಗೆ ಬಂದು ಜೋರಾಗಿ ಮಾತನಾಡಿದ | ಮೆಲ್ಲ ಮಾತನಾಡು ಎಂದಿದ್ದಕ್ಕೆ ಡಾಕ್ಟರ್ ಗೆ ಚೂರಿ ಹಾಕಿದ!

covid ward
22/04/2021

ಮುಂಬೈ: ಕೊರೊನಾ ರೋಗಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ರಾದ್ಧಾಂತ ಸೃಷ್ಟಿಸಿದ ಘಟನೆ ನಡೆದಿದ್ದು, ಸ್ವಲ್ಪ ಮೆತ್ತಗೆ ಮಾತನಾಡು ಎಂದು ಮನವಿ ಮಾಡಿದ್ದಕ್ಕೆ ವೈದ್ಯರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಕೊರೊನಾದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ನಾಂದೇಡ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾಕ್ಕಾಗಿ ಚಿಕಿತ್ಸೆ ಪಡೆಯಲು ದಾಖಲಾಗಿರುವ ವ್ಯಕ್ತಿಯನ್ನು ನೋಡಲು ಭೌಸಾಹೇಬ್ ಗಾಯ್ಕವಾಡ್ ಎಂಬ ವ್ಯಕ್ತಿ ಆಗಮಿಸಿದ್ದು, ಈ ಎಲ್ಲ ಗಲಾಟೆಗೆ ಈತನೊಬ್ಬನೇ ಕಾರಣನಾಗಿದ್ದಾನೆ.

ಏಪ್ರಿಲ್ 20ರಂದು ಈ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದ ಬಳಿಕ ಕೊರೊನಾಕ್ಕೆ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಂಬಂಧಿಯ ಜೊತೆಗೆ ಜೋರುಧ್ವನಿಯಲ್ಲಿ ಬೊಬ್ಬೆ ಹಾಕಿಕೊಂಡು ಈತ ಮಾತನಾಡಿದ್ದಾನೆ. ಈ ವೇಳೆ ಇತರ ರೋಗಿಗಳ ಸಂಬಂಧಿಕರು ಈತನ ಬೊಬ್ಬೆಯಿಂದ ಕಿರಿಕಿರಿ ಅನುಭವಿಸಿದ್ದು, ಸ್ವಲ್ಪ ಮೆಲ್ಲಗೆ ಮಾತನಾಡುವಂತೆ ಮನವಿ ಮಾಡಿದ್ದಾರೆ.


Provided by

ಆದರೆ ಇದರಿಂದ ಸಿಟ್ಟಿಗೆದ್ದ ಭೌಸಾಹೇಬ್ ಇನ್ನಷ್ಟು ಜೋರಾಗಿ ಮಾತನಾಡಿದ್ದಾನೆ. ಈ ವೇಳೆ ಇದು ಮಾರ್ಕೆಟ್ ಅಲ್ಲ, ಆಸ್ಪತ್ರೆ ಎಂದು ಇತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ವೈದ್ಯರು ಮಧ್ಯಪ್ರವೇಶಿಸಿದ್ದು, ಭೌಸಾಹೇಬ್ ನ್ನು ವಾರ್ಡ್ ನಿಂದ ಹೊರ ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಆತ ವೈದ್ಯರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ