ಮಂಗಳೂರು: ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: ಐವರು ಕಾರ್ಮಿಕರ ದಾರುಣ ಸಾವು

ಮಂಗಳೂರು: ವಿಷಾನಿಲ ಸೋರಿಕೆಯಾದ ಘಟನೆ ಮಂಗಳೂರು ಹೊರ ವಲಯದ ಬಜ್ಪೆಯ ಮೀನಿನ ಫ್ಯಾಕ್ಟರಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಮೀರುಲ್ ಇಸ್ಲಾಮ್, ಉಮಾರ್ ಫಾರೂಕ್ ಹಾಗೂ ನಿಜಾಮುದ್ದೀನ್ ಸಾಬ್ ಎಂಬ ಕಾರ್ಮಿಕರು ರಾತ್ರಿಯೇ ಮೃತಪಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಿರಾಜುಲ್ ಇಸ್ಲಾಂ ಮತ್ತು ಶರಾಫತ್ ಅಲಿ ಎಂಬವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ವಿಷ ಅನಿಲ ಸೋರಿಕೆಯಂತಹ ಅಪಾಯಗಳು ಇದ್ದರೂ ಕಾರ್ಮಿಕರಿಗೆ ಯಾವುದೇ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದೇ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಂಪೆನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ , ಮ್ಯಾನೇಜರ್ ಕುಬೇರ್ ಗಾಡೆ , ಸೂಪರ್ ವೈಸರ್ ಮೊಹಮ್ಮದ್ ಅನ್ವರ್ ಹಾಗೂ ಫಾರೂಕ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಹಿಳೆಯ ಮೇಲೆಯೇ ಹರಿದ ಕೆಎಸ್ಸಾರ್ಟಿಸಿ ಬಸ್: ಮಹಿಳೆಯ ದಾರುಣ ಸಾವು
ಹುಬ್ಬಳ್ಳಿ ಅಹಿತಕರ ಘಟನೆ: 40 ಮಂದಿ ಪೊಲೀಸ್ ವಶಕ್ಕೆ
ಎಸ್ ಡಿಪಿಐ ಕಾರ್ಯಕರ್ತನ ಕೊಲೆ ನಡೆದು 24 ಗಂಟೆಯೊಳಗೆ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ!
ಸಂತೋಷ್ ಪಾಟೀಲ್ ಮೊಬೈಲ್ ನಲ್ಲಿತ್ತು 88 ಮಿಸ್ಡ್ ಕಾಲ್?