ಮಾನಸಿಕ ಒತ್ತಡ ಧ್ರುವ ಅವರನ್ನು ಬಲಿ ಪಡೆಯಿತು, ದಲಿತ ರಾಜಕಾರಣಿಗಳಲ್ಲಿ ಇದು ಹೆಚ್ಚು: ಮಹೇಶ್ ಬೇಸರ
ಚಾಮರಾಜನಗರ: ಮಾನಸಿಕ ಒತ್ತಡ ಆರ್.ಧ್ರುವನಾರಾಯಣ್ ಅವರನ್ನು ಬಲಿ ಪಡೆಯಿತು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಅವರಿಂದು ಮಾತನಾಡಿ, ಈ ಕೊಳಕು ರಾಜಕಾರಣದಲ್ಲಿ ಮಾನಸಿಕ ಒತ್ತಡ ರಾಜಕಾರಣಿಗಳಿಗೆ ಭಾದಿಸುತ್ತಿದೆ, ಇದು ದಲಿತ ರಾಜಕಾರಣಿಗಳಲ್ಲಿ ಹೆಚ್ಚು, ಒತ್ತಡ ನಿರ್ವಹಣೆ ಬಗ್ಗೆ ನಾವು ಸೋಲುತ್ತಿದ್ದೇವೆ, ಆ ಒತ್ತಡವೇ ಅವರನ್ನು ಬಲಿ ಪಡೆಯಿತು ಎಂದು ಕಂಬನಿ ಮಿಡಿದಿದ್ದಾರೆ.
ಮತದಾರರು, ಕಾರ್ಯಕರ್ತರು ಹಾಗೂ ರಾಜಕೀಯ ಪಕ್ಷಗಳಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ, ಅನಗತ್ಯವಾಗಿ ನಾಯಕರುಗಳ ಮೇಲೆ ಒತ್ತಡ ಹೇರಬೇಡಿ, ವಿಶೇಷವಾಗಿ ದಲಿತ ರಾಜಕಾರಣಿಗಳ ಒತ್ತಡ ಹೇರಬೇಡಿ ಎಂದರು.
ಆರ್.ಧ್ರುವನಾರಾಯಣ ಚುನಾವಣಾ ಸಮಯದಲ್ಲಿ ಮಾತ್ರ ರಾಜಕಾರಣ ಮಾಡುತ್ತಿದ್ದರೇ ಹೊರತು ಉಳಿದ ಸಮಯದಲ್ಲಿ ಅಭಿವೃದ್ಧಿ, ಜನಪರ ಕಾಳಜಿ ಇದ್ದ ವ್ಯಕ್ತಿ. ಯಾವ ಪಕ್ಷವೇ ಆಗಿರಲಿ, ಯಾರೇ ಆಗಲಿ ಅವರ ಕೆಲಸ ಮಾಡಿ ಕೊಡುತ್ತಿದ್ದರು, ಎಲ್ಲರ ಜೊತೆ ಬಾಂಧವ್ಯ ಹೊಂದಿದ್ದರು, ಧ್ರುವನಾರಾಯಣ ಅವರು ಮಾಡಬೇಕೆಂದು ಕೆಲಸವನ್ನು ಅಭಿಮಾನಿಗಳು, ಜನರಾದ ನಾವು ಮಾಡೋಣ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw