ಏಕತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಹಬ್ಬವೇ ಕ್ರಿಸ್ಮಸ್: ಫಾ.ಆದರ್ಶ್ ಜೋಸೆಫ್
‘”ಪ್ರೀತಿಯ, ಶಾಂತಿಯ, ಸೌಹಾರ್ದತೆಯ ಸಮಾಜವನ್ನು ನಿರ್ಮಿಸುವ ಹಬ್ಬವಾಗಲಿ ಕ್ರಿಸ್ಮಸ್”
ದೇವರ ಪ್ರೀತಿ ಧರಗೆ ಇಳಿದು ಬಂದ ಸುಂದರವಾದ ದಿನವೇ ಕ್ರಿಸ್ಮಸ್. ಪವಿತ್ರ ಬೈಬಲ್ನ ಯೋವನನ್ನು ಬರೆದ ಶುಭ ಸಂದೇಶ ಅಧ್ಯಾಯ 3 ವಾಕ್ಯ 16 ಹೀಗೆ ಹೇಳುತ್ತದೆ.”” ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನು ಧಾರೆಯೆರೆಯುವಂತೆ ಪ್ರೀತಿಸಿದರು “”.ಎರಡು ಸಾವಿರ ಇಪ್ಪತ್ತೆರಡು ವರ್ಷಗಳ ಹಿಂದೆ ಮಾನವಕುಲದ ರಕ್ಷಣೆಗಾಗಿ ಪ್ರೀತಿಯ, ಸೌಹಾರ್ದತೆಯ ಸಂದೇಶವನ್ನು ಸಾರುತಾ ಬಾಲ ಯೇಸು ಗೋದಲಿಯಲ್ಲಿ ಜನಿಸಿದರು. ಏಕತೆ ಮತ್ತು ಸಾಮರಸ್ಯ ವನ್ನು ಸಾರುವ ಹಬ್ಬವೇ ಕ್ರಿಸ್ಮಸ್. ಯಾಕೆಂದರೆ ‘ ಎಲ್ಲರನ್ನೂ ಪ್ರೀತಿಸು, ಶತ್ರುಗಳನ್ನು ಕ್ಷಮಿಸು, ಸರ್ವರಿಗೂ ಒಳಿತನ್ನು ಬಯಸು…….. ‘ ಎಂಬಂತಹ ಜೀವನ ಸಂದೇಶವನ್ನು ಕ್ರಿಸ್ತ ಯೇಸು ಜಗತ್ತಿಗೆ ಸಾರಿದ್ದಾರೆ. ನುಡಿದಂತೆ ನಡೆದ ಕ್ರಿಸ್ತ ಯೇಸುವಿನ ಸಂದೇಶಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಬೇಕಾಗಿದೆ.
ಕ್ರಿಸ್ಮಸ್ ಹಬ್ಬದ ಸಾರಾಂಶ ಅಂದರೆ “” ಪ್ರೀತಿ “” ಯೇಸು ಕ್ರಿಸ್ತನು ನೀಡಿದ ಕಟ್ಟ ಕಡೆಯ ಕಟ್ಟಳೆ ಅಂದರೆ ” ನೀವು ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಬದುಕಬೇಕು ಎಂಬುವುದಾಗಿದೆ. ಎಲ್ಲಾ ಧರ್ಮಗಳ ಅಡಿಪಾಯ ಅಥವಾ ಮೂಲ ತತ್ವ ಪ್ರೀತಿಯಾಗಿದೆ. ಹಿಂದೂ ಧರ್ಮ ಭೋದಿಸುತ್ತದೆ ” ಲೋಕ ಸಮಸ್ತ ಸುಖಿನೋ ಭವಂತು ” ಇಸ್ಲಾಂ ಧರ್ಮ ಭೋದಿಸುತ್ತದೆ ” ನಿನ್ನ ಸಮಾಜದಲ್ಲಿ ಬಡವರು ಇರಬಾರದು ಇತರರಿಗೆ ನಿನ್ನಿಂದ ಕೈಲಾದಷ್ಟು ಸಹಾಯವನ್ನು ಮಾಡು ” ಎಲ್ಲಾ ಧರ್ಮಗಳು ಪ್ರೀತಿಯನ್ನು ಸಾರುತಾ ಮಾನವರನ್ನು ದೇವರಲ್ಲಿಗೆ ಕೊಂಡೊಯ್ಯುವ ಮಾರ್ಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ, ನಮ್ಮ ಸಮಾಜದಲ್ಲಿ ಏನೋ ಒಂದು ತಪ್ಪು ಆಗುತ್ತಾ ಇದೆ. ಈ ತಪ್ಪು ಅಂದರೆ ಮಾನವ — ಮಾನವರ ನಡುವೆ ಉಂಟಾಗುವ ವೈಷಮ್ಯ, ಸೇಡು, ವೈರತ್ವ, ಗಲಭೆ, ಅಶಾಂತಿ . ಇವುಗಳು ಮನುಕುಲಕ್ಕೆ ಮಾರಕವಾಗಿದೆ. ಇಂಥ ತಪ್ಪನ್ನು ತಿದ್ದುವಂತಹ ಪ್ರಯತ್ನ ಎಲ್ಲರಿಂದಲೂ ಆಗಬೇಕಾಗಿದೆ. ಮನುಕುಲಕ್ಕೆ ಮಾರಕವಾಗುವ ಗಲಭೆ, ಅಶಾಂತಿಯನ್ನು ನಿರ್ಮೂಲನೆ ಮಾಡಿ ಪ್ರೀತಿಯ, ಸೌಹಾರ್ದತೆಯ, ಸಾಮರಸ್ಯದ ಬೀಜವನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಪ್ರಜ್ಞಾವಂತ ರಿಂದ ನಡಯಬೇಕಾಗಿದೆ.
ನಮ್ಮ ದೇಶ ‘ವೈವಿದ್ಯತೆಯಲ್ಲಿ ಏಕತೆ ‘ ಹೊಂದಿರುವ ದೇಶವಾಗಿದೆ. ನಮ್ಮ ದೇಶವು ವಿವಿಧ ಧರ್ಮಗಳು, ಜಾತಿಗಳು, ಭಾಷೆಗಳು ವಿವಿಧ ವೇಷ ವಿಧಾನಗಳಿಂದ ಸುಂದರವಾಗಿದೆ. ಯಾವುದೇ ಭೇದ – ಭಾವ ವಿಲ್ಲದೆ ಏಕತೆ ಮತ್ತು ಸಾಮರಸ್ಯದಿಂದ ನಮ್ಮ ದೇಶವನ್ನು ಸಮಾಜವನ್ನು ಕಟ್ಟಬೇಕಾಗಿದೆ.
ಭಾರತೀಯ ಬಾಹ್ಯಕಾಶ ಯಾತ್ರಿಕನಾದ ಶ್ರೀ ರಾಕೇಶ್ ಶರ್ಮ ಬಾಹ್ಯಕಾಶದಲ್ಲಿ ಇರುವಾಗ ಅವತ್ತಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಯವರು ಕೇಳುತ್ತಾರೆ “” ಮೇಲಿನಿಂದ ನೋಡುವಾಗ ನಮ್ಮ ಭಾರತ ಹೇಗೆ ಕಾಣುತ್ತಿದೆ. ಅದಕ್ಕೆ ಉತ್ತರವಾಗಿ ಶ್ರೀ ರಾಕೇಶ್ ಶರ್ಮಾ ಹೀಗೆ ಹೇಳುತಾರೆ. ” ಸಾರೆ ಜಹಾಂ ಸೇ ಅಚ್ಚಾ, ಹಮಾರಾ ಹಿಂದೂಸ್ತಾನ್ “
ಇದರ ಅರ್ಥ ವಿಶ್ವದ ಎಲ್ಲಾ ದೇಶಗಳಿಂದ ನಮ್ಮ ಭಾರತ ಸುಂದರವಾಗಿದೆ. ನಮ್ಮ ದೇಶ “ಸಾರೆ ಜಹಾಂ ಸೇ ಅಚ್ಚಾ” ಆಗಬೇಕಾದರೆ ಶಾಂತಿಯ, ಸೌಹಾರ್ದತೆಯ, ಸಾಮರಸ್ಯದ, ಸಮಾಜವನ್ನು ನಿರ್ಮಿಸ ಬೇಕಾಗಿದೆ. ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ತ ಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇವರು ನಮ್ಮೊಳಗ ಶಾಂತಿ – ಸಮಾಧಾನವನ್ನು ಕರುಣಿಸಲಿ,
ಎಲ್ಲರೂ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಜೀವಿಸುವಂತಾಗಲಿ, ಕಷ್ಟ- ನೋವುಗಳ ಬೆಟ್ಟ ಕರಗಲಿ, ನಮ್ಮ ಮನೆಯಲ್ಲಿ ಸದಾ ಆನಂದ ತುಂಬಿರಲಿ, ಸುಖ — ಶಾಂತಿಯ ಜೀವನ, ಉತ್ತಮ ಅರೋಗ್ಯ ನಮ್ಮದಾಗಲಿ. ಏಕತೆ ಮತ್ತು ಸಾಮರಸ್ಯದ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬ ಸಂತೋಷದಿಂದ ಆಚರಿಸುವಂತಾಗಲಿ.
✍ ಫಾ. ಆದರ್ಶ್ ಜೋಸೆಫ್.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw