ಪುಣೆಯಲ್ಲಿ 50.65 ಕೋಟಿ ಮೌಲ್ಯದ ಮೆಥಾಕ್ವಲೋನ್ ವಶ: ಐವರ ಬಂಧನ - Mahanayaka
11:26 AM Wednesday 12 - March 2025

ಪುಣೆಯಲ್ಲಿ 50.65 ಕೋಟಿ ಮೌಲ್ಯದ ಮೆಥಾಕ್ವಲೋನ್ ವಶ: ಐವರ ಬಂಧನ

26/08/2023

ಪುಣೆಯಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) 50.65 ಕೋಟಿ ರೂ.ಗಳ ಮೆಥಾಕ್ವಲೋನ್ ವಶಪಡಿಸಿಕೊಂಡ ನಂತರ ಐವರನ್ನು ಬಂಧಿಸಲಾಗಿದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪುಣೆಯ ಡಿಆರ್ ಐ ಅಧಿಕಾರಿಗಳು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದಿದ್ದಾರೆ. ಇದು ತೆಲಂಗಾಣದ ರಿಜಿಸ್ಟರ್ ಹೊಂದಿದ ಕಾರ್ ಆಗಿತ್ತು. ವಾಹನವನ್ನು ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ಬಿಳಿ ಸ್ಫಟಿಕದ ವಸ್ತುಗಳನ್ನು ಹೊಂದಿರುವ 4 ನೀಲಿ ಬಣ್ಣದ ಪ್ಲಾಸ್ಟಿಕ್ ಪಾತ್ರೆಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ಇದು 101.31 ಕೆಜಿ ಮೆಥಕ್ವಲೋನ್ ಎಂದು ಹೇಳಲಾಗಿದ್ದು, ಇದರ ಮೌಲ್ಯ 50.65 ಕೋಟಿ ರೂಪಾಯಿ ಆಗಿದೆ. ತೆಲಂಗಾಣ, ಮಹಾರಾಷ್ಟ್ರ, ದೆಹಲಿ ಮತ್ತು ಹರಿಯಾಣ ನಿವಾಸಿಗಳಾದ ಐವರನ್ನು ಎನ್ಡಿಪಿಎಸ್ ಕಾಯ್ದೆ 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.


Provided by

ಬಂಧಿತರು ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಮಾರಾಟ ಮತ್ತು ಖರೀದಿ, ಸಾಗಣೆ ಮತ್ತು ರಫ್ತಿನಲ್ಲಿ ತೊಡಗಿದ್ದರು. ಇವರು ಸಾಗರೋತ್ತರ ಸಂಪರ್ಕಗಳನ್ನು ಸಹ ಹೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇತ್ತೀಚಿನ ಸುದ್ದಿ