ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ | ಇದೇ ಮೊದಲ ಬಾರಿಗೆ ಹೊಸ ಪ್ರಯೋಗ - Mahanayaka
10:36 PM Thursday 19 - September 2024

ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ | ಇದೇ ಮೊದಲ ಬಾರಿಗೆ ಹೊಸ ಪ್ರಯೋಗ

03/02/2021

ಹೈದರಾಬಾದ್: ವ್ಯಕ್ತಿಯೊಬ್ಬರ ಹೃದಯವನ್ನು ಬೇರೆಯವರಿಗೆ ಕಸಿ ಮಾಡಲು ಜೀವಂತ ಹೃದಯವನ್ನು ಮೆಟ್ರೋ ರೈಲಿನ ಮೂಲಕ ರವಾನೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಈ ಹೊಸ ಪ್ರಯೋಗ ನಡೆಸಲಾಗಿದೆ.

ಆಂಬುಲೆನ್ಸ್ ನಲ್ಲಿ ಝೀರೋ ಟ್ರಾಫಿಕ್ ನಲ್ಲಿ ಹೃದಯ ಸಾಗಿಸುವುದು, ಸಾಮಾನ್ಯವಾಗಿ ನೋಡಿದ್ದೇವೆ. ಆದರೆ,  ಜೀವಂತ ಹೃದಯ ಸಾಗಿಸಲೆಂದೇ ಹೈದರಾಬಾದ್ ಮೆಟ್ರೋ ರೈಲ್ವೆ ಮಂಗಳವಾರ ನಾಗೋಲೆ ಹಾಗೂ ಜುಬಿಲಿ ಹಿಲ್ಸ್‌ ನಡುವೆ ವಿಶೇಷ ಗ್ರೀನ್ ಕಾರಿಡಾರ್ ರೂಪಿಸಿದ್ದು,  ಕಮಿನೇನಿ ಆಸ್ಪತ್ರೆಯಿಂದ ಜುಬಿಲಿ ಹಿಲ್ಸ್‌ವರೆಗೂ ತಡೆರಹಿತ ಮೆಟ್ರೋ ರೈಲಿನ ಸೇವೆ ಒದಗಿಸಿ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೃದ್ರೋಗಿಯೊಬ್ಬರ ಜೀವ ಉಳಿಸಲಾಗಿದೆ.

ಹೈದರಾಬಾದ್ ಕಮಿನೇನಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ ಮಾಡಲಾಗಿದೆ ಎಂದು ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎನ್ ವಿಎಸ್ ರೆಡ್ಡಿ ತಿಳಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ