ಮೆಕ್ಸಿಕೋದಲ್ಲಿ 45 ಚೀಲಗಳಲ್ಲಿ ಮಾನವ ಅವಶೇಷಗಳು ಪತ್ತೆ..!
ಮೆಕ್ಸಿಕೋದ ಜಲಿಸ್ಕೋ ರಾಜ್ಯದ ರಾಜಧಾನಿ ಗ್ವಾಡಲಜಾರಾ ನಗರದ ಹೊರಗಿನ ಕಂದಕವೊಂದರಲ್ಲಿ ಮಾನವ ಅವಶೇಷಗಳ 45 ಚೀಲಗಳು ಪತ್ತೆಯಾಗಿದೆ.
ಏಳು ಮಂದಿ ಕಾಲ್ ಸೆಂಟರ್ ಉದ್ಯೋಗಿಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರ ತಂಡಕ್ಕೆ ಮಿರಾಡೋರ್ ಡೆಲ್ ಬಾಸ್ಕ್ ಕಂದಕದಲ್ಲಿ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳನ್ನು ಒಳಗೊಂಡಿರುವ 45 ಚೀಲಗಳು ಸಿಕ್ಕಿದೆ ಎಂದು ಜಲಿಸ್ಕೋ ರಾಜ್ಯದ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಗ್ವಾಡಲಜಾರಾದ ಜಾರ್ಡಿನ್ಸ್ ವಲ್ಲರ್ಟಾ ಮತ್ತು ಲಾ ಇಸ್ಟಾನ್ಸಿಯಾ ನೆರೆಹೊರೆಯಲ್ಲಿನ ಎರಡು ಸಂಸ್ಥೆಗಳಿಂದ 7 ಮಂದಿ ಕಾಲ್ ಸೆಂಟರ್ ಉದ್ಯೋಗಿಗಳು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆದಿತ್ತು. ಇದೀಗ ಅದೇ ಪ್ರದೇಶದಲ್ಲಿ ಪೊಲೀಸರು ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳನ್ನು ಒಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಆದರೆ ಈ ಪ್ರದೇಶದಲ್ಲಿ ಬೆಳಕಿನ ಕೊರತೆ ಎದುರಾಗಿದ್ದು, ಶೋಧನಾ ತಂಡಕ್ಕೆ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ಮೆಕ್ಸಿಕೋದಾದ್ಯಂತ 100,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಅನೇಕರು ಸಂಘಟಿತ ಅಪರಾಧಕ್ಕೆ ಬಲಿಯಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw