ಮೈಕ್ರೋಸಾಫ್ಟ್ ಬಂದ್: ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸಹಜ ಸ್ಥಿತಿಗೆ - Mahanayaka
10:05 PM Saturday 7 - September 2024

ಮೈಕ್ರೋಸಾಫ್ಟ್ ಬಂದ್: ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸಹಜ ಸ್ಥಿತಿಗೆ

20/07/2024

ಶುಕ್ರವಾರ ಕೆಲ-ಕಾಲ ಮೈಕ್ರೋಸಾಫ್ಟ್‌ ವಿಂಡೋಸ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ದೇಶಾದ್ಯಂತ ವಿಮಾನ ಯಾನ ಸೇವೆ ವ್ಯತ್ಯಯಗೊಂಡಿತ್ತು. ಶನಿವಾರ ಮುಂಜಾನೆ 3 ಗಂಟೆಯಿಂದ ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತಿಳಿಸಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ನಾಗರಿಕ ವಿಮಾನ ಯಾನ ರಾಜ್ಯ ಸಚಿವ ರಾಮ್ ಮೋಹನ್ ನಾಯ್ಡು, ಪ್ರಯಾಣದ ಮರು ವ್ಯವಸ್ಥೆ ಹಾಗೂ ಮರುಪಾವತಿ ಪ್ರಕ್ರಿಯೆಗಳ ಕುರಿತು ಕಾಳಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮೈಕ್ರೊಸಾಫ್ಟ್‌ 365 ಹಾಗೂ ಅಝ್ಯೂರ್ ಸೇವೆಗಳಲ್ಲಿನ ವ್ಯತ್ಯಯದಿಂದ ವಿಮಾನ ಯಾನ ವಲಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿತ್ತು. ವಿಮಾನ ಸಂಸ್ಥೆಗಳ ನಿರ್ವಾಹಕರ ಕಂಪ್ಯೂಟರ್‌ಗಳು ಕಾರ್ಯಾಚರಿಸದಿದ್ದರಿಂದ ಇಂಡಿಗೊ, ಏರ್ ಇಂಡಿಯಾ, ಸ್ಪೈಸ್ ಜೆಟ್ ಹಾಗೂ ಅಕಾಸ ಸೇರಿದಂತೆ ನೂರಾರು ವಿಮಾನಗಳ ಕಾರ್ಯಾಚರಣೆ ವಿಳಂಬಗೊಂಡಿತು ಮತ್ತು ಹಲವು ವಿಮಾನಗಳ ಸೇವೆ ರದ್ದುಗೊಂಡಿದ್ದವು.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ