ಪಿಂಚಣಿದಾರರಿಗೆ ಕನಿಷ್ಟ ಪಿಂಚಣಿಯನ್ನು 9000 ರೂ.ಗೆ ಹೆಚ್ಚಿಸಬೇಕು: ಸುಕುಮಾರ್

sukumarn'
03/06/2023

ಉಡುಪಿ: ಪಿಂಚಣಿದಾರರಿಗೆ ಕನಿಷ್ಟ ಪಿಂಚಣಿಯನ್ನು 9000 ರೂ.ಗೆ ಹೆಚ್ಚಿಸಬೇಕು. ಅಲ್ಲದೆ ವರ್ಷ ಪ್ರತಿ ಬೆಲೆ ಏರಿಕೆಯ ಆಧಾರದಲ್ಲಿ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಭವಿಷ್ಯ ನಿಧಿ ಪಿಂಚಣಿದಾರರಿಗೂ ಕೊಡಬೇಕು ಎಂದು ಎಂದು ಪಿಂಚಣಿದಾರ ಸಂಘದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಒತ್ತಾಯಿಸಿದ್ದಾರೆ.
ಪಿಂಚಣಿದಾರರ ಸಂಘದ ಉಡುಪಿ ವಲಯದ ವತಿಯಿಂದ ಉಡುಪಿಯ ಬನ್ನಂಜೆ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಲಾದ ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಸದ್ಯ ಭವಿಷ್ಯ ನಿಧಿ ಖಾತೆಯಲ್ಲಿ 5ಕೋಟಿ ಚಂದದಾರರ ಒಟ್ಟು 11 ಲಕ್ಷ ಕೋಟಿ ರೂ. ಹಣ ಇದೆ. ಇದು ರಾಜ್ಯದ ಬಜೆಟ್ ಮೊತ್ತಕ್ಕಿಂತ ನಾಲ್ಕು ಪಟ್ಟು ಜಾಸ್ತಿ. ಈ ಹಣಕ್ಕೆ ಪ್ರತಿವರ್ಷ 9ಸಾವಿರ ರೂ. ಕೋಟಿ ಆದಾಯ ಬರುತ್ತದೆ. ಕಾರ್ಪೊರೇಟರ್‌ಗಳಿಗೆ ಲಕ್ಷ ಲಕ್ಷ ಕೋಟಿ ರೂ. ಹಣ ನೀಡುವ ಸರಕಾರ, ಭವಿಷ್ಯ ನಿಧಿ ಪಿಂಚಣಿದಾರರಿಗೆ ಕೇವಲ ಒಂದು ಸಾವಿರ ಕೋಟಿ ರೂ. ನೀಡಿದೆ. ಭವಿಷ್ಯ ನಿಧಿಯಲ್ಲಿ ಅನ್‌ಕ್ಲೈಮ್ಡ್ ಆಗಿರುವ ಸಾವಿರ ಕೋಟಿ ಹಣ ಉಳಿದುಕೊಂಡಿದೆ. ಇದರ ಬಡ್ಡಿಯಲ್ಲಿಯೇ ಪಿಂಚಣಿಯನ್ನು ಕೊಡಬಹುದಾಗಿದೆ ಎಂದರು.

ಸಿಐಟಿಯು ಜಿಲ್ಲಾ ಮುಖಂಡ ಎಚ್.ನರಸಿಂಹ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಬೀಡಿ ಸಂಘದ ಪ್ರಮುಖ ರಾದ ಬಲ್ಕೀಸ್ ಕುಂದಾಪುರ ಉಪಸ್ಥಿತರಿದ್ದರು.
ಸಂಘದ ಉಡುಪಿ ವಲಯ ಅಧ್ಯಕ್ಷೆ ಲಲಿತಾ ಸುವರ್ಣ ಗರಡಿಮಜಲು, ಕೋಶಾಧಿಕಾರಿ ಸುಂದರಿ ಕುಂದರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಕುಂದರ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version