ಕಾರು ಹತ್ತಿಸಿ ಪ್ರತಿಭಟನಾ ನಿರತ ಮೂವರು ರೈತರ ಭೀಕರ ಹತ್ಯೆ ಮಾಡಿದ ಕೇಂದ್ರ ಸಚಿವರ ಪುತ್ರ! - Mahanayaka
1:56 AM Wednesday 11 - December 2024

ಕಾರು ಹತ್ತಿಸಿ ಪ್ರತಿಭಟನಾ ನಿರತ ಮೂವರು ರೈತರ ಭೀಕರ ಹತ್ಯೆ ಮಾಡಿದ ಕೇಂದ್ರ ಸಚಿವರ ಪುತ್ರ!

lakhimpur kheri
03/10/2021

ಲಕ್ನೋ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ್ದು, ಪರಿಣಾಮವಾಗಿ ಮೂವರು ರೈತರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಇದರಿಂದಾಗಿ ರೊಚ್ಚಿಗೆದ್ದ ರೈತರು ಆಶಿಶ್ ಮಿಶ್ರಾನ ಕಾರು ಸೇರಿದಂತೆ ಮೂರು ಕಾರುಗಳನ್ನು ಸುಟ್ಟು ಹಾಕಿದ್ದಾರೆ.

ಲಖಿಂಪುರ್ ಖೇರಿಯ ಟಿಕುನಿಯಾದಲ್ಲಿ ಅಜಯ್ ಮಿಶ್ರಾ ಅವರ ಗ್ರಾಮವಾಗಿದ್ದು, ಅಲ್ಲಿ ನಡೆದ ಕಾರ್ಯಕ್ರಮಕ್ಕೆ ಮುನ್ನ ಕೇಂದ್ರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದರು, ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಮುಖ್ಯ ಅತಿಥಿಯಾಗಿದ್ದರು. ಪ್ರತಿಭಟನಾ ನಿರತ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಿ ಪ್ರತಿಭಟಿಸಲು ಸಿದ್ಧತೆ ನಡೆಸಿದ್ದರು.

ಆಶಿಶ್ ಮಿಶ್ರಾ  ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಬರ ಮಾಡಿಕೊಳ್ಳಲು ಹೋದಾಗ ಅವರ ಕಾರಿನ ಮುಂದೆ ರೈತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಇದರಿಂದ ಕೋಪಗೊಂಡ ಆಶಿಶ್ ಮಿಶ್ರಾ, ರೈತರ ಮೇಲೆಯೇ ಕಾರು ಹತ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು  ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಸ್ಪಷ್ಟಪಡಿಸಿದೆ. ಘಟನೆಯ ಬಳಿಕ ರೈತರು ಆಶಿಶ್ ಮಿಶ್ರಾ ಅವರ ಕಾರು ಸೇರಿದಂತೆ ಮೂರು ಕಾರುಗಳನ್ನು ಸುಟ್ಟು ಹಾಕಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ಮುಂದುವರಿಸಲಾಗಿದೆ. ರೈತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಕ್ರೂಸ್ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ ಅರೆಸ್ಟ್

ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ದಾರುಣ ಸಾವು!

ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್

ಬಿಜೆಪಿ ಅಭ್ಯರ್ಥಿ ವಿರುದ್ಧ ಭರ್ಜರಿ ಜಯಗಳಿಸಿದ ಮಮತಾ ಬ್ಯಾನರ್ಜಿ!

ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ

ಮರಕ್ಕೆ ನೇಣುಬಿಗಿದುಕೊಂಡು ಎಎಸ್ ಐ ಆತ್ಮಹತ್ಯೆಗೆ ಶರಣು!

ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!

ಇತ್ತೀಚಿನ ಸುದ್ದಿ