ರೈತರ ಮಾರಣಹೋಮ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಪುತ್ರ ಪೊಲೀಸರ ಮುಂದೆ ಹಾಜರು
ಲಕ್ನೋ: ರೈತರ ಮೇಲೆ ಕಾರು ಹರಿಸಿ ಮಾರಣಹೋಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ(Ajay Mishra) ಅವರ ಮಗ ಆಶಿಶ್ ಮಿಶ್ರ (Ashish Mishra) ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಪ್ರಕರಣದ ತನಿಖೆಗೆ ರಚಿಸಲಾಗಿರುವ SIT ಅಧಿಕಾರಿಗಳು ಬೆಳಿಗ್ಗೆ 11ಕ್ಕೆ ವಿಚಾರಣೆ ಆರಂಭಿಸಿದ್ದಾರೆ. ಅಕ್ಟೋಬರ್ 3ರಂದು ಸಚಿವರ ಪುತ್ರ ರೈತರ ಮೇಲೆ ಕಾರು ಹರಿಸಿದ ಘಟನೆ ಹಾಗೂ ಆ ಬಳಿಕ ನಡೆದ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು.
ಆಶಿಶ್ ಮಿಶ್ರ ವಿರುದ್ಧ ಅ.4ರಂದೇ ಕೊಲೆಯ ಆರೋಪದ ಎಫ್.ಐ.ಆರ್. ದಾಖಲಾಗಿದ್ದರೂ, ಅ.7 ರಂದು ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಈ ಘಟನೆಯಲ್ಲಿ ಕೇಂದ್ರ ಸಚಿವರ ಪುತ್ರನೇ ಪ್ರಮುಖ ಆರೋಪಿಯಾಗಿದ್ದು, ಈತನ ವಿರುದ್ಧ ಹಲವು ಸಾಕ್ಷಿಗಳು ಕೂಡ ರೈತರ ಬಳಿಯಲ್ಲಿದೆ. ಸ್ವತಃ ಆಶಿಶ್ ಮಿಶ್ರ ಕಾರನ್ನು ರೈತರ ಮೇಲೆ ನುಗ್ಗಿಸಿ, ಬಳಿಕ ಕಾರಿನಿಂದ ಇಳಿದು ಓಡುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿದೆ. ಆದರೆ, ಘಟನಾ ಸ್ಥಳದಲ್ಲಿ ನನ್ನ ಮಗ ಇರಲೇ ಇಲ್ಲ ಎಂದು ಅಜಯ್ ಮಿಶ್ರ ವಾದಿಸಿದ್ದಾರೆ.
ಇದೊಂದು ಗಂಭೀರವಾದ ಘಟನೆಯಾಗಿದ್ದರೂ, ಪ್ರಧಾನಿ ಮೋದಿಯವರಾಗಲಿ, ಗೃಹ ಸಚಿವ ಅಮಿತ್ ಶಾ ಅವರಾಗಲಿ. ಈ ಬಗ್ಗೆ ಮಾತನಾಡಿದೇ ಮೌನವಹಿಸಿರುವುದು ಕೂಡ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೆಲೆಬ್ರೆಟಿಗಳಿಗೆ ಶುಭಕೋರಿ ಟ್ವೀಟ್ ಮಾಡುವ ಪ್ರಧಾನಿಗೆ ರೈತರ ಮಾರಣಹೋಮಾ ನಡೆದಿರುವುದು ಗೊತ್ತಿಲ್ಲವೇ? ತಮ್ಮದೇ ಸಂಪುಟ ಸಚಿವನ ಮಗನೇ ಕಾರು ಹರಿಸಿರುವುದು ಕೂಡ ಗೊತ್ತಿಲ್ಲವೇ? ಎಂದು ವಿಪಕ್ಷಗಳು ಟೀಕಿಸಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
26 ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡು ಸರ್ಕಾರದ ಐತಿಹಾಸಿಕ ಹೆಜ್ಜೆ
ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದೆಳೆದು ಶಿಕ್ಷಕನಿಂದ ಅಸಭ್ಯ ವರ್ತನೆ | ವಿಡಿಯೋ ವೈರಲ್
ನಮ್ಮ ಮನೆಯಲ್ಲಿಯೂ ಹೆಂಡತಿ ಗದರುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ
ರೈತರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ | ಭೀಮ್ ಆರ್ಮಿ ಎಚ್ಚರಿಕೆ
ಮಕ್ಕಳು ಜ್ಯೂಸ್ ಕುಡಿದ ಬಳಿಕ ಜ್ಯೂಸ್ ಗೆ ವಿಷ ಬೆರೆಸಿದ್ದೇನೆ, ನಾನೂ ವಿಷ ಕುಡಿದ್ದೇನೆ ಎಂದ ತಂದೆ!
ಅತ್ಯಾಚಾರ ನಡೆದು ಕೇವಲ 9 ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!
ಯೋಗ ಶಿಕ್ಷಕನಿಂದ ಯುವತಿಯ ಅತ್ಯಾಚಾರ: ಯೋಗದ ಹೆಸರಿನಲ್ಲಿ ಶಿಕ್ಷಕನ ಕಾಮಲೀಲೆ ಬಯಲು
ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು!