ರಾಜಸ್ಥಾನದಲ್ಲಿ ಬಯಲಾಯ್ತು ಅಮಾನುಷ ಕೃತ್ಯ: ಬಾಲಕಿಯನ್ನು ಕೊಂದು ಸುಟ್ಟು ಹಾಕಿದ ಕ್ರೂರಿಗಳು

ಬಾಲಕಿಯನ್ನು ಕೊಂದು ಮೃತದೇಹವನ್ನು ಕಲ್ಲಿದ್ದಲು ಕುಲುಮೆಯಲ್ಲಿ ಹಾಕಿ ಸುಟ್ಟಿರುವ ಪ್ರಕರಣ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಕಲ್ಲಿದ್ದಲು ಕುಲುಮೆಯ ಬಳಿ ಬಾಲಕಿಗೆ ಸೇರಿದ ಬಳೆಗಳು ಮತ್ತು ಚಪ್ಪಲಿಗಳು ಪತ್ತೆಯಾಗಿದೆ. ಬಾಲಕಿಯ ಮೃತದೇಹದ ಸುಟ್ಟ ಅವಶೇಷಗಳು ಕುಲುಮೆಯೊಳಗೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮತ್ತು ಆಕೆಯ ತಾಯಿ ಹೊಲದಲ್ಲಿ ಮೇಕೆ ಮೇಯಿಸಲು ಹೋಗಿದ್ದರು. ಮಧ್ಯಾಹ್ನದ ವೇಳೆಗೆ ತಾಯಿ ಮನೆಗೆ ಹಿಂದಿರುಗಿದ್ದರೂ, ಬಾಲಕಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಬಾಲಕಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರಾದರೂ ಆಕೆ ಪತ್ತೆಯಾಗಿರಲಿಲ್ಲ.
ಹುಡುಕಾಟದ ಸಮಯದಲ್ಲಿ ಬಾಲಕಿಯ ಬಳೆ ಮತ್ತು ಚಪ್ಪಲಿಗಳು ಕಲ್ಲಿದ್ದಲು ಕುಲುಮೆ ಬಳಿ ಬಿದ್ದಿರುವುದು ಕುಟುಂಬ ಸದಸ್ಯರ ಗಮನಕ್ಕೆ ಬಂದಿದೆ.
ಬಾಲಕಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಸಾಮೂಹಿಕ ಅತ್ಯಾಚಾರ ಮಾಡಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw