ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!
ಹಿಮಾಚಲಪ್ರದೇಶ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡು ಕೆಲವೇ ನಿಮಿಷಗಳಲ್ಲಿ ಆಯುರ್ವೇದ ವೈದ್ಯೆ ಮೃತಪಟ್ಟ ಘಟನೆ ನಿನ್ನೆ ನಡೆದಿದ್ದು, ನಿನ್ನೆ ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ ದೀಪಾ ಶರ್ಮಾ ಅವರು ಭೂಕುಸಿತದ ವೇಳೆ ಸಿಡಿದ ಕಲ್ಲುಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಸುಮಾರು 12:59ರ ವೇಳೆಗೆ ಫೋಟೋ ಪೋಸ್ಟ್ ಮಾಡಿದ್ದ ದೀಪಾ ಶರ್ಮಾ, “ನಾಗರಿಕರನ್ನು ಪ್ರವೇಶಿಸಲು ಬಿಡುವ ಭಾರತದ ತುತ್ತ ತುದಿಯಲ್ಲಿ ನಿಂತಿದ್ದೇನೆ. ಈ ತುದಿಯಿಂದ 80 ಕಿ.ಮೀ. ಮುಂದೆ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಟಿಬೆಟ್ ಗಡಿ ಇದೆ ಎಂದು ಪೋಸ್ಟ್ ಮಾಡಿದ್ದರು”.
ಇವರು ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ 1:25ರ ವೇಳೆಗೆ ಭೂ ಕುಸಿತವಾಗಿದ್ದು, ಟೆಂಪೋ ಟ್ರಾವೆಲ್ ವೊಂದರ ಮೇಲೆ ಬೃಹತ್ ಕಲ್ಲು ಬಿದ್ದ ಸುದ್ದಿಯೂ ಹೊರ ಬಂದಿದೆ. ಇದರಲ್ಲಿ ಮೃತಪಟ್ಟವರ ಪೈಕಿ ದೀಪಾ ಶರ್ಮಾ ಅವರೂ ಒಬ್ಬರು ಎಂದು ತಿಳಿದು ಬಂದಿದೆ.
ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಎನ್ ಜಿಓ ಜೊತೆಗೆ ಕೆಲಸ ಮಾಡಲು ದೀಪಾ ಶರ್ಮಾ ಇಲ್ಲಿಗೆ ಬಂದಿದ್ದರು. ಹಿಮಾಚಲ ಪ್ರದೇಶದ ಸಂಗ್ಲಾದಲ್ಲಿ ನಡೆದ ಭೂಕುಸಿತದಿಂದಾಗಿ ಅವರು ಮೃತಪಟ್ಟಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್
ಆತ್ಮಹತ್ಯೆಯ ಕೊನೆಯ ಕ್ಷಣದಲ್ಲಿ ಯುವತಿಯನ್ನು ರಕ್ಷಿಸಿದ ಪೊಲೀಸ್ | ವಿಡಿಯೋ ವೈರಲ್
ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ
ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ